Ashwaveega News 24×7 ಮಾರ್ಚ್ 24 – 2026 : ಆಭರಣ ಪ್ರಿಯರಿಗೆ ಮತ್ತೆ ಶಾಕ್ ನೀಡಿದೆ ಚಿನ್ನ ಮತ್ತು ಬೆಳ್ಳಿ ದರ. ನಿನ್ನೆ ಭಾರೀ ಇಳಿಕೆ ಕಂಡಿದ್ದ ಗೋಲ್ಡ್ ರೇಟ್ ಇಂದು ಮತ್ತೆ ಏರಿಕೆಯ ದಾರಿಗೆ ತಿರುಗಿದೆ.
ನಿನ್ನೆ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 10 ಸಾವಿರ ರೂಪಾಯಿ ಇಳಿಕೆ ಕಂಡು 1 ಲಕ್ಷದ 34 ಸಾವಿರಕ್ಕೆ ತಲುಪಿತ್ತು. ಇದರಿಂದ ಗ್ರಾಹಕರಿಗೆ ಉತ್ತಮ ಖರೀದಿ ಅವಕಾಶ ದೊರಕಿತ್ತು. ಆದರೆ ಆ ಅವಕಾಶವನ್ನು ಮಿಸ್ ಮಾಡಿಕೊಂಡವರಿಗೆ ಇದೀಗ ನಿರಾಸೆ ಎದುರಾಗಿದೆ.
ಇಂದು ಮತ್ತೆ ಚಿನ್ನದ ಬೆಲೆ ಜಿಗಿತ ಕಂಡು 10 ಗ್ರಾಂಗೆ 1 ಲಕ್ಷದ 44 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾದ ಬದಲಾವಣೆಗಳು ಹಾಗೂ ಯುದ್ಧ ಪರಿಸ್ಥಿತಿಯಲ್ಲಿ ಕಂಡ ಸುಧಾರಣೆಯೇ ಇದಕ್ಕೆ ಪ್ರಮುಖ ಕಾರಣ .
ಚಿನ್ನ ಮಾತ್ರವಲ್ಲ, ಬೆಳ್ಳಿ ದರದಲ್ಲೂ ಇದೇ ರೀತಿಯ ಚೇತರಿಕೆ ಕಂಡುಬಂದಿದೆ. ನಿನ್ನೆ ಸುಮಾರು 30 ಸಾವಿರ ರೂಪಾಯಿ ಇಳಿಕೆ ಕಂಡಿದ್ದ ಬೆಳ್ಳಿ ದರ ಇಂದು ಭಾರೀ ಏರಿಕೆ ಕಂಡಿದೆ. ಪ್ರಸ್ತುತ ಒಂದು ಕೆ.ಜಿ ಬೆಳ್ಳಿಯ ಬೆಲೆ 2 ಲಕ್ಷದ 32 ಸಾವಿರ ರೂಪಾಯಿಗೆ ತಲುಪಿದೆ.
ಯುದ್ಧದ ಆತಂಕ ಕಡಿಮೆಯಾಗುತ್ತಿದ್ದಂತೆ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲ್ಪಡುವ ಚಿನ್ನ ಮತ್ತು ಬೆಳ್ಳಿಯ ಮೇಲಿನ ಬೇಡಿಕೆ ಮತ್ತೆ ಹೆಚ್ಚುತ್ತಿರುವುದು ಈ ದರ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.
ಒಟ್ಟಾರೆ, ಕಳೆದ ಕೆಲ ದಿನಗಳಿಂದ ಏರುಪೇರಾಗುತ್ತಿರುವ ಚಿನ್ನ ಮತ್ತು ಬೆಳ್ಳಿ ದರಗಳು ಗ್ರಾಹಕರಲ್ಲಿ ಆತಂಕ ಮೂಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ದರ ಹೇಗೆ ಬದಲಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
