Ashwaveega News 24×7 ಮಾರ್ಚ್ 12 – 2026 : ಬೆಂಗಳೂರು : ಗಲ್ಫ್ ಪ್ರದೇಶದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ತೀವ್ರ ಏರಿಳಿತ ಕಾಣಿಸುತ್ತಿದೆ. ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡುತ್ತಿರುವ ಹಿನ್ನೆಲೆಯಲ್ಲಿ ಗೋಲ್ಡ್ ಮತ್ತು ಸಿಲ್ವರ್ ದರಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿವೆ.
ನಿನ್ನೆ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇಂದು ಸ್ವಲ್ಪ ಇಳಿಕೆ ಕಂಡಿದೆ. ಪ್ರಸ್ತುತ 10 ಗ್ರಾಂ ಚಿನ್ನದ ದರ ಸುಮಾರು 1 ಲಕ್ಷ 65 ಸಾವಿರ ರೂಪಾಯಿಗೆ ತಲುಪಿದ್ದು, ನಿನ್ನೆಯಿಂದ ಸುಮಾರು 3 ಸಾವಿರ ರೂಪಾಯಿ ಇಳಿಕೆಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಇದೇ ರೀತಿಯಲ್ಲಿ ಬೆಳ್ಳಿ ದರದಲ್ಲೂ ಮತ್ತೆ ಕುಸಿತ ಕಂಡಿದೆ. ಪ್ರಸ್ತುತ ಒಂದು ಕೆ.ಜಿ. ಬೆಳ್ಳಿ ದರ ಸುಮಾರು 2 ಲಕ್ಷ 72 ಸಾವಿರ ರೂಪಾಯಿಯಷ್ಟಿದೆ. ನಿನ್ನೆ ಬೆಳ್ಳಿ ದರ ಸುಮಾರು 3 ಲಕ್ಷ ರೂಪಾಯಿ ಸನಿಹದಲ್ಲಿ ವಹಿವಾಟು ಆಗುತ್ತಿತ್ತು.
ಡಾಲರ್ ಮೇಲೆ ಹೂಡಿಕೆ ಹೆಚ್ಚುತ್ತಿರುವುದು ಹಾಗೂ ಜಾಗತಿಕ ರಾಜಕೀಯ ಉದ್ವಿಗ್ನತೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಉದ್ವಿಗ್ನ ಪರಿಸ್ಥಿತಿಯೂ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ದಿಡೀರ್ ಏರಿಳಿತಕ್ಕೆ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ದರಗಳಲ್ಲಿ ನಿರಂತರ ಬದಲಾವಣೆ ಕಾಣಿಸುತ್ತಿರುವುದರಿಂದ ಹೂಡಿಕೆದಾರರು ಹಾಗೂ ಗ್ರಾಹಕರಲ್ಲಿ ಆತಂಕ ಹೆಚ್ಚಾಗಿದೆ .
