Ashwaveega News 24×7 ಜನವರಿ 14 – ಬೆಂಗಳೂರು: ಸಂಕ್ರಾಂತಿ ಬಳಿಕ ಮತ್ತೆ ಪವರ್ ಶೇರ್ ಸದ್ದು ಶುರು ಆಗಲಿದೆ. ನಾಯಕತ್ವ ಬದಲಾವಣೆ ಗೊಂದಲ ವಿಚಾರವಾಗಿ ಡಿಕೆಶಿ ಒತ್ತಡ ತಂತ್ರ ಪ್ರಯೋಗಿಸಲು ಮುಂದಾಗಿದ್ದು, ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಿದ್ದಾರೆ ಅಂತೆ .
ಹೌದು , ರಾಹುಲ್ ಗಾಂಧಿ ಭೇಟಿಯ ಬೆನ್ನಲ್ಲೇ ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ಭೇಟಿ ನೀಡಿದ್ದು, ಸಂಕ್ರಾಂತಿ ನಂತರ ಸಿಎಂ ಸ್ಥಾನದ ಕುರಿತು ಒತ್ತಡ ತಂತ್ರ ರೂಪಿಸಲಿದ್ದಾರೆ … ಈ ಭೇಟಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಿಎಂ ಹುದ್ದೆಯ ಗೊಂದಲಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತೆ .
ಜ.16 ಹಾಗೂ 22 ರಂದು ದೆಹಲಿಗೆ ಟೂರ್ ಫಿಕ್ಸ್ ಮಾಡಿಕೊಂಡಿರುವ ಡಿಕೆಶಿ, ಒಂದು ದಿನ ರಾಹುಲ್ ಭೇಟಿಗೆ ಅವಕಾಶ ಕೇಳಿದ್ದಾರೆ. ಜ.22 ರಂದು ಕೂಡ ದೆಹಲಿಗೆ ಭೇಟಿ ನೀಡಲಿರುವ ಡಿ.ಕೆ ಶಿವಕುಮಾರ್, ಆಗಲೂ ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹಾಕಲು ಪ್ರಯತ್ನಿಸುತ್ತಿದ್ದಾರೆ. ಈ ತಿಂಗಳ ಅಂತ್ಯದ ವೇಳೆಗೆ ನಾಯಕತ್ವ ಗೊಂದಲಕ್ಕೆ ತೆರೆ ಬೀಳುವ ನಿರೀಕ್ಷೆ ಇದ್ದು, ನಾಯಕತ್ವ ಗೊಂದಲ, ಸಂಪುಟ ಪುನರ್ರಚನೆ ವಿಚಾರ ಸೇರಿ ಎಲ್ಲದಕ್ಕೂ ತಿಂಗಳ ಅಂತ್ಯಕ್ಕೆ ಏನ್ ಆಗುತ್ತೆ ಅಂತ ಕಾದು ನೋಡಬೇಕು …
