Ashwaveega News 24×7 ಜನವರಿ 14 – Good News For Farmers : ರೈತರು ತಮ್ಮ ಜಮೀನಿನಲ್ಲಿ ವಿದ್ಯುತ್ ಗಳಿದ್ದರೆ ನಾನಾ ರೀತಿಯ ತೊಂದರೆ ಅನುಭವಿಸಬೇಕಾಗುತ್ತದೆ. ಯಾರ ಹತ್ರಾನೂ ಹೇಳಿಕೊಳ್ಳುವಂತಿಲ್ಲ, ಬಿಡುವಂತಿಲ್ಲ ಅಂಥ ಸಮಸ್ಯೆ ಇದು. ಇದರ ಬಗ್ಗೆ ಇಲ್ಲಿಯವರೆಗೂ ಯಾವ ಸರ್ಕಾರವೂ ತಲೆ ಕೆಡಿಸಿಕೊಂಡಿರಲಿಲ್ಲ. ಈಗ ರಾಜ್ಯ ಸರ್ಕಾರ ರೈತರ ಈ ಸಮಸ್ಯೆಗೆ ಸ್ಪಂದಿಸಲು ಮುಂದಾಗಿದೆ.
ಹೊಲ, ಗದ್ದೆ ಅಥವಾ ತೋಟಗಳಲ್ಲಿ ವಿದ್ಯುತ್ ಕಂಬಗಳುಗಳಿದ್ದರೆ ಮೊದಲನೆಯಾದಾಗಿ ಅದರ ಸುತ್ತ ಉಳುಮೆ ಮಾಡಲು ಕಷ್ಟವಾಗುತ್ತದೆ. ಎರಡನೆಯಾಗಿ ಬೆಳೆ ಸಂರಕ್ಷಣೆ ಮಾಡುವುದು ಕೂಡ ಸುಲಭವಾಗಿರುವುದಿಲ್ಲ. ಈ ರೀತಿ ರೈತರು ನಿತ್ಯ ಒಂದಿಲ್ಲೊಂದು ಯಾತನೆ ಅನುಭವಿಸಬೇಕಾಗುತ್ತದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಹೌದು ಕರ್ನಾಟಕ ಸರ್ಕಾರವು ರೈತರಿಗೆ ಸಿಹಿ ಸುದ್ದಿ ಕೊಟ್ಟಿದೆ , ತಮ್ಮ ಜಮೀನಿನಲ್ಲಿ ಟ್ರಾನ್ಸ್ಫಾರ್ಮರ್ ಅಥವಾ ವಿದ್ಯುತ್ ಕಂಬಗಳಿದ್ದರೆ, ಅವರಿಗೆ ಮಾಸಿಕ ಬಾಡಿಗೆ ಮತ್ತು ಪರಿಹಾರ ಸಿಗಲಿದೆ. ಹೊಲ, ಗದ್ದೆ ಅಥವಾ ತೋಟಗಳಲ್ಲಿ ವಿದ್ಯುತ್ ಕಂಬಗಳು ಅಥವಾ ಟ್ರಾನ್ಸ್ಫಾರ್ಮರ್ಗಳಿದ್ದರೆ ಆ ಜಮೀನಿನ ಮಾಲಿಕನಿಗೆ ಒಮ್ಮೆ 10,000 ರೂಪಾಯಿಗಳ ಪರಿಹಾರ ಕೊಡಲಿದೆ. ಇದಲ್ಲದೆ ಇದು ಶಾಶ್ವತ ಸಮಸ್ಯೆ ಆಗಿರುವ ಕಾರಣಕ್ಕೆ ಆ ರೈತನಿಗೆ ಪ್ರತಿ ತಿಂಗಳು ಬಾಡಿಗೆಯನ್ನು ನೀಡಲು ನಿರ್ಧರಿಸಲಾಗಿದೆ. ಇದು ಜಮೀನಿನ ಗಾತ್ರ ಮತ್ತು ಮೂಲಸೌಕರ್ಯದ ಆಧಾರದ ಮೇಲೆ ತಿಂಗಳಿಗೆ ₹2,000 ರಿಂದ ₹5,000 ಅಥವಾ ಅದಕ್ಕಿಂತ ಹೆಚ್ಚು ಇರಬಹುದು, ಜೊತೆಗೆ ಒಂದು-ಬಾರಿ ಪರಿಹಾರದ ಮೊತ್ತವೂ ಲಭ್ಯವಿದೆ, ಮತ್ತು ವಿದ್ಯುತ್ ಕಂಬ ಅಳವಡಿಕೆಗೂ ಮುನ್ನ ರೈತರ ಅನುಮತಿ ಕಡ್ಡಾಯವಾಗಿರುತ್ತೆ .

ಮೊದಲನೆಯದಾಗಿ ಟ್ರಾನ್ಸ್ಫಾರ್ಮರ್ ಕೆಟ್ಟುಹೋದರೆ 48 ಗಂಟೆಗಳ ಒಳಗೆ ದುರಸ್ತಿ ಮಾಡಬೇಕು. ಆ ಮೂಲಕ ಬೆಳೆ ಹಾನಿ ಹಾಗು ನೀರಿನ ಕೊರತೆ ತಪ್ಪಿಸಬೇಕು. ಅಲ್ಲದೆ ರೈತರು ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಪರಿಹಾರ ನೀಡದಿದ್ದರೆ ಪ್ರತಿ ವಾರಕ್ಕೆ 100 ರೂಪಾಯಿ ದಂಡವನ್ನು ನೀಡಬೇಕು ಎಂದು ಕೂಡ ಹೊಸ ನಿಯಮದಲ್ಲಿ ಹೇಳಲಾಗಿದೆ. ಪರಿಹಾರ ಹಣ ನೀಡದಿದ್ದರೆ ಸಂಬಂಧಪಟ್ಟ ಅಧಿಕಾರಿಯನ್ನು ಹೊಣೆ ಮಾಡಲಾಗುತ್ತದೆ.
