
ಐಪಿಎಲ್ 2025ರ ಆವೃತ್ತಿಯ ಆರಂಭದ ಹೊತ್ತಲೇ ಲಕ್ನೋ ತಂಡಕ್ಕೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಆಸ್ಟ್ರೇಲಿಯಾದ ಸ್ಟಾರ್ ಅಲ್ರೌಂಡರ್ ಮಿಚೆಲ್ ಮಾರ್ಷ್ ಗಾಯದಿಂದ ಚೇತರಿಸಿಕೊಂಡಿದ್ದು ಐಪಿಎಲ್ ಸೀಸನ್18ಟ ಟೂರ್ನಿಗೆ ಫಿಟ್ ಆಗಿದ್ದಾರೆ ಎಂಬ ಮಾಹಿತಿ ಹೊರ ಬಂದಿದೆ. ಮೆಗಾ ಹರಾಜಿನಲ್ಲಿ 3.40 ಕೋಟಿ ನೀಡಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಖರೀದಿ ಮಾಡಿತ್ತು. ಆದರೆ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮಾರ್ಷ್ ಗಾಯಗೊಂಡಿದ್ದರು. ಹೀಗಾಗಿ ಅವರು ಕ್ರಿಕೆಟ್ನಿಂದ ಹಲವು ದಿನಗಳ ಕಾಲ ದೂರ ಉಳಿದಿದ್ದರು. ಸದ್ಯಕ್ಕೆ ಅವರು ಚೇತರಿಕೆ ಕಂಡಿದ್ದು ಐಪಿಎಲ್ನಲ್ಲಿ ಲಕ್ನೋ ಪರ ಬ್ಯಾಟ್ ಬೀಸಲು ತಯಾರಿಯಾಗಿದ್ದಾರೆ. ಮಿಚೆಲ್ ಮಾರ್ಷ್ ಐಪಿಎಲ್ನಲ್ಲಿ 42 ಪಂದ್ಯಗಳಿಂದ 3 ಅರ್ಧಶತಕ ಒಳಗೊಂಡತೆ 665 ರನ್ ಗಳಿಸಿದ್ದಾರೆ. ಕಳೆದ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಮಾರ್ಷ್ ಈ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಲಿದ್ದಾರೆ. ಮಾರ್ಚ್ 24ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ದ ಲಕ್ನೋ ತಂಡ ತನ್ನ ಮೊದಲ ಪಂದ್ಯ ಆಡಲಿದೆ.
