ನವದೆಹಲಿ : ST, SC ಮೀಸಲಾತಿಯನ್ನು ತೆಗೆದು ಮುಸ್ಲಿಂ ಸಮುದಾಯಕ್ಕೆ ನೀಡಲು ಸರ್ಕಾರ ಚಿಂತಿಸಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದು, ನವದೆಹಲಿ ಮಾತನಾಡಿದ ಅವರು, ಪೊಲೀಸ್ ಠಾಣೆಗೆ ಬೆಂಕಿ ಹಾಕಿದ್ದ ಆರೋಪಿಗಳನ್ನು ಖುಲಾಸೆ ಮಾಡಿದರು, ದೇವಸ್ಥಾನಕ್ಕೆ ಮಠಗಳಿಗೆ ನೀಡಿದ ಜಾಗಕ್ಕೆ ಈಗ ವಕ್ಫ್ ನೋಟಿಸ್ ನೀಡುತ್ತಿದೆ. ಸಂಗೊಳ್ಳಿ ಇಡೀ ಊರು ಈಗ ವಕ್ಫ್ ಆಗಿದೆ ಈಗ ಟೆಂಡರ್ಗಳಲ್ಲೂ 4% ಮೀಸಲಾತಿ ನೀಡಲು ಹೊರಟಿದೆ. ಎಸ್ಸಿ,ಎಸ್ಟಿ ಸಿಗುತ್ತಿದ್ದ ಮೀಸಲಾತಿಯನ್ನು ತೆಗೆದು ಮುಸ್ಲಿಂ ಸಮುದಾಯಕ್ಕೆ ನೀಡಲು ಸರ್ಕಾರ ಚಿಂತಿಸಿದೆ ಎಂದಿದ್ದಾರೆ.
ಇನ್ನೂ ಈ ಪ್ರಕರಣ ಬಹಿರಂಗವಾದ ಬಳಿಕ ಸುಳ್ಳು ಆರೋಪ ಎಂದು ಸಿದ್ದರಾಮಯ್ಯ ಅವರು ಹೇಳುತ್ತಾರೆ. ಆದರೆ ಆಗಸ್ಟ್ನಲ್ಲಿ ಮುಸ್ಲಿಂ ನಾಯಕರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಅದರ ಮೇಲೆ ಇವರು ಕಾನೂನು ಮಾಡಲು ಹೊರಟಿದ್ದಾರೆ. ಕಾನೂನು ಇಲಾಖೆಯ ಇ-ಫೈಲ್ನಲ್ಲಿ ಈ ದಾಖಲೆ ಇದೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿ ನಮ್ಮದೇನು ಆಕ್ಷೇಪ ಇಲ್ಲ. ಆದರೆ ಒಂದು ವರ್ಗಕ್ಕೆ ಯಾಕೆ ತುಷ್ಠೀಕರಣ ಮಾಡುವುದು ಎಂದು ಪ್ರಶ್ನಿಸಿದರು.