ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ನಾಳೆ ಗೌರಿ ಹಬ್ಬ ಮತ್ತು ಬರುವ ದಿನಗಳಲ್ಲಿ ಗಣೇಶ ಹಬ್ಬದ ಹಿನ್ನೆಲೆ ಕೆ.ಆರ್. ಮಾರ್ಕೆಟ್ನಲ್ಲಿ ಜನರು ಹಬ್ಬದ ಸಾಮಾಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ. ಹೂವು, ಹಣ್ಣು, ಬಾಳೆಕಂದು, ಗರಿಕೆ ಸೇರಿದಂತೆ ಹಬ್ಬದ ಸಕಲ ಸಾಮಾಗ್ರಿಗಳು ಮಾರ್ಕೆಟ್ನಲ್ಲಿ ಲಭ್ಯವಿದ್ದು, ಜನರು ಮುಗಿಬಿದ್ದಿದ್ದಾರೆ.
ಆದರೆ, ಈ ಬಾರಿಯೂ ಹಬ್ಬದ ಖುಷಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹೂವು ಮತ್ತು ಹಣ್ಣುಗಳ ದರದಲ್ಲಿ ಗಗನಕ್ಕೇರಿದ್ದು,
ಹೂವುಗಳ ದರ:
- ಕನಕಾಂಬರ: ಪ್ರತಿ ಕೆಜಿಗೆ ₹3000
- ಮಲ್ಲಿಗೆ: ಪ್ರತಿ ಕೆಜಿಗೆ ₹600
- ಗುಲಾಬಿ: ಪ್ರತಿ ಕೆಜಿಗೆ ₹250
- ಸೇವಂತಿಗೆ: ಪ್ರತಿ ಕೆಜಿಗೆ ₹180
- ಸುಗಂಧರಾಜ: ಪ್ರತಿ ಕೆಜಿಗೆ ₹240
ಹಣ್ಣುಗಳ ದರ:
- ಸೇಬು: ಪ್ರತಿ ಕೆಜಿಗೆ ₹120-₹200
- ದಾಳಿಂಬೆ: ಪ್ರತಿ ಕೆಜಿಗೆ ₹160
- ಏಲಕ್ಕಿ ಬಾಳೆ: ಪ್ರತಿ ಕೆಜಿಗೆ ₹120
- ಸೀತಾಫಲ: ಪ್ರತಿ ಕೆಜಿಗೆ ₹100
- ಸಪೋಟ: ಪ್ರತಿ ಕೆಜಿಗೆ ₹100
- ದ್ರಾಕ್ಷಿ: ಪ್ರತಿ ಕೆಜಿಗೆ ₹120-₹200
- ಅನಾನಸ್: 2 ಗೆ ₹100-₹120
ಹಬ್ಬದ ಸಾಮಾಗ್ರಿಗಳು:
- ಬಾಳೆಕಂದು: ಜೋಡಿಗೆ ₹60
- ಮಾವಿನ ತೋರಣ: ₹20
- ಗರಿಕೆ: ಕಟ್ಟಿ ₹30
- ಬಿಲ್ವಪತ್ರೆ: ₹20
- ಎಕ್ಕದಹಾರ: ₹50-₹60
ಹಬ್ಬದ ಖರೀದಿ ಜೋರಾಗಿದ್ದು, ಜನರು ಧಾರ್ಮಿಕ ಸಾಮಾಗ್ರಿಗಳ ಖರೀದಿಗೆ ಮುಗಿಬಿದ್ದಿದ್ದಾರೆ.