Ashwaveega News 24×7 ಮಾರ್ಚ್ 31 – 2026 : ಕೊಲ್ಲಿ ಯುದ್ಧದ ಪರಿಣಾಮ ದೇಶದ ವಿವಿಧ ಕ್ಷೇತ್ರಗಳ ಮೇಲೆ ಬೀರುತ್ತಿರುವ ನಡುವೆ, ಇದೀಗ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೂ ಅದರ ತಟ್ಟಿದೆ. ಗ್ಯಾಸ್ ಕೊರತೆಯಿಂದ ಆನೆಗಳಿಗೆ ಆಹಾರ ಸಿದ್ಧಪಡಿಸುವ ಕಾರ್ಯದಲ್ಲೇ ಅಡಚಣೆ ಉಂಟಾಗಿದೆ.
ಸಾಮಾನ್ಯವಾಗಿ ಆನೆಗಳಿಗೆ ಪೌಷ್ಟಿಕ ಆಹಾರವಾಗಿ ರಾಗಿ, ಹುರಳಿ ಮತ್ತು ಅಕ್ಕಿಯನ್ನು ಬೇಯಿಸಿ ಮುದ್ದೆ ರೂಪದಲ್ಲಿ ನೀಡಲಾಗುತ್ತದೆ. ಪ್ರತಿದಿನ ಸುಮಾರು 40 ಕೆಜಿ ರಾಗಿ, 60 ಕೆಜಿ ಹುರಳಿ ಮತ್ತು 20 ಕೆಜಿ ಅಕ್ಕಿ ಬಳಸಲಾಗುತ್ತದೆ. ಆದರೆ ಗ್ಯಾಸ್ ಲಭ್ಯತೆ ಕಡಿಮೆಯಾದ ಕಾರಣ, ಈಗ ಸೌದೆ ಒಲೆ ಬಳಸಿಕೊಂಡು ಆಹಾರ ತಯಾರಿಸಲಾಗುತ್ತಿದೆ.
ಪ್ರಸ್ತುತ ಸಕ್ರೆಬೈಲು ಆನೆ ಬಿಡಾರದಲ್ಲಿ 24 ಆನೆಗಳಿದ್ದು, ಅವುಗಳ ಆರೈಕೆಗಾಗಿ ಸಿಬ್ಬಂದಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದರೆ ಇಂಧನ ಸಮಸ್ಯೆ ಈ ಕಾರ್ಯವನ್ನು ಇನ್ನಷ್ಟು ಕಷ್ಟಕರವಾಗಿಸಿದೆ.
ಗ್ಯಾಸ್ ಕೊರತೆಯ ಹಿನ್ನೆಲೆ, ಪರ್ಯಾಯ ವ್ಯವಸ್ಥೆಗಳಿಗೆ ಮೊರೆ ಹೋಗಿರುವ ಸಿಬ್ಬಂದಿ, ಆನೆಗಳ ಆಹಾರದಲ್ಲಿ ಯಾವುದೇ ವ್ಯತ್ಯಾಸ ಬಾರದಂತೆ ಕಾಳಜಿ ವಹಿಸುತ್ತಿದ್ದಾರೆ.
ಒಟ್ಟಾರೆ, ಜಾಗತಿಕ ಮಟ್ಟದ ಯುದ್ಧದ ಪರಿಣಾಮಗಳು ಸ್ಥಳೀಯ ಮಟ್ಟದಲ್ಲೂ ಹೇಗೆ ಪರಿಣಾಮ ಬೀರುತ್ತವೆ ಎಂಬುದಕ್ಕೆ ಸಕ್ರೆಬೈಲು ಆನೆ ಬಿಡಾರ ಒಂದು ಉದಾಹರಣೆಯಾಗಿದೆ.
