ಗರ್ಬಾ ಕಿಂಗ್ ಎಂದೇ ಪ್ರಸಿದ್ಧರಾಗಿರುವ ನಟ ಅಶೋಕ್ ಮಾಲಿ ಹೃದಯಾಘಾದಿಂದ ನಿಧನರಾಗಿದ್ದು, ಈ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ನವರಾತ್ರಿ ಉತ್ಸವದ ಸಂದರ್ಭದಲ್ಲಿ ನೃತ್ಯ ಮಾಡುತ್ತಿದ ವೇಳೆ ಅಶೋಕ್ ಮಾಲಿ ಕುಸಿದು ಬಿದ್ದು ಸಾವನ್ನಪ್ಪಿದ್ದು, ಕುಸಿದು ಬೀಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನೂ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ದಸರಾ ಸಮಯದಲ್ಲಿ ಧುಲೆ ಜಿಲ್ಲೆಯ ಶಿಂಧಖೇಡಾ ತಾಲೂಕಿನ ಹೋಲ್ ಗ್ರಾಮದಲ್ಲಿ ನವರಾತ್ರಿ ಉತ್ಸವ ಏರ್ಪಡಿಸಲಾಗಿತ್ತು ಎನ್ನಲಾಗಿದೆ. ಈ ಕಾರ್ಯಕ್ರಮದಲ್ಲಿ ಅಶೋಕ್ ಮಾಲಿ ಭಾಗವಹಿಸಿದ್ದು, ಪ್ರದರ್ಶನ ನೀಡಲು ಆಗಮಿಸಿದ್ದರು. ಅಶೋಕ್ ಅವರ ಗರ್ಬಾ ನೃತ್ಯ ಕಾಣಲು ಅನೇಕ ಜನರು ನೆರೆದಿದ್ದರು.
ಪ್ರದರ್ಶನದ ವೇಳೆ ಅಶೋಕ್ ಮಾಲಿ ಹೃದಯಾಘಾತವಾಗಿದ್ದು, ನೃತ್ಯ ಮಾಡುತ್ತಿರುವಾಗಲೇ ಅಶೋಕ್ ನೆಲಕ್ಕೆ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಾಗಲೇ ಅಶೋಕ್ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ : https://ashwaveega.com/fir-filed-against-reality-show-contestant-huli-karthik/