Ashwaveega News 24×7 ಮಾರ್ಚ್ 20 – 2026 : ಕನಕಪುರ : ಪಟ್ಟರೆಡ್ಡಿಪಾಳ್ಯದ SSVN ಶಾಲೆಯ ಮೇಲೆ ಹತ್ತಿರುವ ಹೈಟೆನ್ಶನ್ ಲೈನ್ ಪರಿಸರದಲ್ಲಿ ಭಾರೀ ಅಪಾಯ ಉಂಟಾಗಿದೆ. ಮರಗಳು ಬರ್ನ್ ಆಗುತ್ತಿದರೂ, KPTCL ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರ್ ತುಂಡಾಗಿ ಬಿದ್ದಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ, ಸ್ಪಂದನೆಗೆ ಅವಕಾಶ ದೊರಕಿಲ್ಲ. SSVN ಶಾಲೆ ಮಾಲೀಕರು, ಸಾಮಾಜಿಕ ಜವಾಬ್ದಾರಿ ಪಾಲಿಸುವಂತೆ ಮನವಿ ಮಾಡಿದರು, ಆದರೆ KPTCL ಅಧಿಕಾರಿಗಳಿಂದ ಉದ್ಧಟತನದ ಹಾಗೂ ಅಸಡ್ಡೆಯ ಉತ್ತರಗಳು ಬಂದಿವೆ.
ಸ್ಥಳೀಯ ವಲಯದ ವೆಂಕಟೇಶ್, ಸುರಮಾನ್ಯ ಪುರ ಡಿವಿಷನ್ ಎಂಜಿನಿಯರ್, ಹೈಟೆನ್ಶನ್ ಲೈನ್ ಕಟಾವು ಮತ್ತು ಮೇಂಟೇನೆನ್ಸ್ಗೆ ಹಣವಿಲ್ಲವೆಂದು ತಿಳಿಸಿದ್ದಾರೆ. ಹಾಗೆಯೇ, ಶಾಲೆಯ ಪರಿಸರ ಸುರಕ್ಷತೆಯ ಸಂಬಂಧಿತ ಟೆಂಡರ್ ಕರೆಯುವುದಕ್ಕೂ ಅವಕಾಶ ದೊರಕುತ್ತಿಲ್ಲ.
ಹಲವು ಬಾರಿ ಕರೆ ಮಾಡಿದರೂ ಇಂಜಿನಿಯರ್ ಮಹಾಂತೇಶ್ ಸ್ಪಂದಿಸದೇ ಇದ್ದಾರೆ. ಇದರಿಂದ ಶಾಲೆಯ ಮಾಲೀಕರು ಮಕ್ಕಳ ಭದ್ರತೆಯನ್ನು ಖಾತರಿಪಡಿಸಲು ಸಂಕಷ್ಟದಲ್ಲಿದ್ದಾರೆ. ಸಾರ್ವಜನಿಕರ ಪ್ರಕಾರ, “ಮಕ್ಕಳಿಗೆ ಅಪಾಯವಾದರೆ ಹೊಣೆಗಾರ ಯಾರು ? SSVN ಶಾಲೆ ಮಾಲೀಕರು” ಎಂಬ ಪ್ರಶ್ನೆ ಎದುರಾಗಿದೆ .
SSVN ಶಾಲೆಯ ಪರಿವಾರ ಮತ್ತು ಸ್ಥಳೀಯರು ಈ ವಿಷಯಕ್ಕೆ ತಕ್ಷಣದ ಕ್ರಮ ಕೈಗೊಳ್ಳಲು ಮತ್ತು KPTCL ನಿಂದ ಸುರಕ್ಷತಾ ಕ್ರಮ ಜಾರಿಗೆ ಬರಬೇಕೆಂಬ ಮನವಿ ಮಾಡಿದ್ದಾರೆ .
