ಅಧಿವೇಶನದ ಕೊನೆಯ ದಿನದಂದು ವಿಧಾನಸಭೆಯಲ್ಲಿ ಹನಿಟ್ರ್ಯಾಪ್ನದ್ದೇ ಸದ್ದು. ಸಹಕಾರ ಸಚಿವ ಕೆ ಎನ್ ರಾಜಣ್ಣ ಕೊಟ್ಟ ಹೇಳಿಕೆಯಿಂದ ರಾಜಕೀಯದಲ್ಲಿ ಸಂಚಲನ ಸೃಷ್ಠಿಯಾಗಿ ಇಂದು ಕೂಡ ಮುಂದುವರೆದಿದೆ. ಹೀಗಾಗಿ ಸದನದ ಕೊನೆಯ ದಿನ ವಿಪಕ್ಷ ನಾಯಕರು ಈ ಹನಿಟ್ರ್ಯಾಪ್ ಹಿಂದೆ ಇರುವವರನ್ನು ಪತ್ತೆ ಹಚ್ಚಬೇಕು ಎಂದು ಸದನದ ಆರಂಭದಲ್ಲೇ ಪಟ್ಟು ಹಿಡಿದು ಸರ್ಕಾರಕ್ಕೆ ಧಿಕ್ಕಾರ ಹಾಕಿದರು. ಒಂದು ಹಂತದಲ್ಲಿ ಸ್ಪೀಕರ್ ಯು ಟಿ ಖಾದರ್ ಪೀಠಕ್ಕೆ ತೆರಳಿ ಕಾಗದದ [ಪ್ರತಿಯನ್ನು ಹರಿದು ಎಸೆದರು. ಈ ಮಧ್ಯೆ ವಿಪಕ್ಷಗಳ ಟೀಕಗೆ ಸಿಎಂ ಸಿದ್ದರಾಮಯ್ಯ, ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಉತ್ತರ ಕೊಟ್ಟರೂ ವಿಪಕ್ಷಗಳು ತಮ್ಮ ಪಟ್ಟನ್ನು ಕೈ ಬಿಡಲಿಲ್ಲ.ಬಾವಿಗಿಳಿದು ಸರ್ಕಾರ ವಿರುದ್ದ ಪ್ರತಿಭಟನೆ ಮುಂದುವರೆಸಿದರು. ವಿಪಕ್ಷಗಳ ಟೀಕೆಗೆ, ಪ್ರತಿಭಟನೆಗೆ ತಲೆಕೆಡಿಸಿಕೊಳ್ಗದ ಸಿದ್ದರಾಮಯ್ಯ ಬಜೆಟ್ ಮೇಲಿನ ಪ್ರಶ್ನೆಗಳಿಗೆ ಉತ್ತರ ನೀಡಿದರು. ಸಿಎಂ ಸಿದ್ದರಾಮಯ್ಯ ಉತ್ತರ ನೀಡುವಾಗಲೇ ವಿಪಕ್ಷ ನಾಯಕರು ಸಿಡಿ ಹಿಡಿದು ಪ್ರದರ್ಶನ ಮಾಡಿದರು. ಈ ವೇಳೆ ಸ್ಪೀಕರ್ ಯು.ಟಿ ಖಾದರ್ 2025ರ ಕರ್ನಾಟಕ ಧನವಿನಿಯೋಗ ವಿಧೇಯಕನನ್ನು ಮಂಡನೆಗೆ ಹಾಕಿ ಬಿಲ್ ಪಾಸ್ ಮಾಡಿದರು. ಮಂಡನೆ ಸಂದರ್ಭದಲ್ಲೂ ವಿಪಕ್ಷಗಳು ಪ್ರತಿಭಟನೆಯನ್ನು ಮುಂದುವರೆಸಿದ್ದರಿಂದ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.
ಅಭಿಷೇಕ್.ಎಸ್

ಅಭಿಷೇಕ್.ಎಸ್