ದೆಹಲಿ : ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ , ವಿಜಯೇಂದ್ರ ವಿರುದ್ಧ ಹೈಕಮಾಂಡ್ಗೆ ದೂರು ಕೊಡುವ ವಿಚಾರವಾಗಿ ದೆಹಲಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ಕೊಟ್ಟಿದ್ದಾರೆ . ಪಕ್ಷದ ರಾಜ್ಯಾಧ್ಯಕ್ಷರಿಗೆ ಈಗ ಜ್ಞಾನೋದಯವಾದಂತಿದೆ, ವಕ್ಫ್ ವಿರುದ್ಧ ಇದು ಅವರ ಮೊದಲ ಹೋರಾಟವಿರಬಹುದು,
ಈಗ ಹೋರಾಟ ಮಾಡವಂದಥದ್ದು ಏನೂ ಇಲ್ಲ, ನಮ್ಮ ತಂಡ ರೈತರನ್ನು ಭೇಟಿಯಾಗಿ ಅವರ ಕಷ್ಟಗಳನ್ನು ದಾಖಲಿಸಿಕೊಂಡು ದಾಖಲೆ ಸಮೇತ ವರದಿಯನ್ನು ಜೆಪಿಸಿಗೆ ನೀಡಿದೆ ನಾನು ಬಿಜೆಪಿ ವಿರುದ್ಧ ಎಂದೂ ಮಾತಾಡಿಲ್ಲ. ಸಚಿವ ರಾಜನಾಥ್ ಭೇಟಿಯಾಗಿ ವಕ್ಫ್ ಬಗ್ಗೆ ಚರ್ಚಿಸ್ತೇನೆ ಎಂದು ಹೇಳಿದ್ದಾರೆ.