Ashwaveega News 24×7 ಮಾರ್ಚ್ 21 – 2026 : ಗಲ್ಫ್ ಪ್ರದೇಶದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯಿಂದ ಜಾಗತಿಕ ಮಟ್ಟದಲ್ಲಿ ಇಂಧನ ಬಿಕ್ಕಟ್ಟು ತಲೆದೋರಿದ ಹಿನ್ನೆಲೆ, International Energy Agency (IEA) ಮಹತ್ವದ ಶಿಫಾರಸುಗಳನ್ನು ಹೊರಡಿಸಿದೆ. ಇಂಧನ ಹಾಗೂ ನೈಸರ್ಗಿಕ ಅನಿಲ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹಲವು ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದೆ .
IEA ನೀಡಿರುವ ಸಲಹೆಗಳಲ್ಲಿ ಪ್ರಮುಖವಾಗಿ ವರ್ಕ್ ಫ್ರಂ ಹೋಮ್ ನೀತಿಯನ್ನು ಮತ್ತೆ ಜಾರಿಗೆ ತರಬೇಕೆಂಬ ಮಾತು ಚರ್ಚೆಗೆ ಬಂದಿದೆ . ಕೋವಿಡ್-19 ಸಮಯದಲ್ಲಿ ಅನುಸರಿಸಲಾಗಿದ್ದ ಈ ವಿಧಾನ ಮತ್ತೆ ವಾಪಸ್ಸಾಗುತ್ತಾ ಎಂಬ ಪ್ರಶ್ನೆ ಈಗ ಜನರಲ್ಲಿ ಮೂಡಿದೆ .
ಇಂಧನ ಬಳಕೆಯನ್ನು ನಿಯಂತ್ರಿಸಲು ಕಚೇರಿಗಳಲ್ಲಿ ಉದ್ಯೋಗಿಗಳ ಹಾಜರಾತಿ ಕಡಿಮೆ ಮಾಡುವುದು, ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವುದು ಮತ್ತು ಅನಗತ್ಯ ಪ್ರಯಾಣವನ್ನು ತಗ್ಗಿಸುವುದು ಸೇರಿದಂತೆ ಹಲವು ಮಾರ್ಗಗಳನ್ನು IEA ಸೂಚಿಸಿದೆ.
ರಾಜ್ಯದಲ್ಲಿಯೂ ಈ ಶಿಫಾರಸುಗಳ ಪರಿಣಾಮ ಕಂಡುಬರುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಸರ್ಕಾರ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲದಿದ್ದರೂ, ಭವಿಷ್ಯದಲ್ಲಿ ಪರಿಸ್ಥಿತಿ ಗಂಭೀರವಾದರೆ ತುರ್ತು ಕ್ರಮವಾಗಿ ವರ್ಕ್ ಫ್ರಂ ಹೋಮ್ ಜಾರಿಗೆ ತರಲು ಸಾಧ್ಯತೆ ಇರುವುದನ್ನು ನಿರಾಕರಿಸಲು ಸಾಧ್ಯವಿಲ್ಲ.
ಆದರೆ, ಕೋವಿಡ್ ಕಾಲದಂತೆ ಸಂಪೂರ್ಣ ಲಾಕ್ಡೌನ್ ಅಥವಾ ತುರ್ತು ಪರಿಸ್ಥಿತಿ ಮರುಕಳಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಇಂಧನ ಉಳಿತಾಯದ ದೃಷ್ಟಿಯಿಂದ ಮಾತ್ರ ಕೆಲವು ನಿಯಂತ್ರಣ ಕ್ರಮಗಳು ಜಾರಿಯಾಗುವ ಸಾಧ್ಯತೆ ಇದೆ …
