
ಚಾಂಪಿಯನ್ಸ್ ಟ್ರೋಫಿಗೆ ಪೈನಲ್ ಅಖಾಡ ತಯಾರಾಗಿದೆ. ಎರಡು ಬಲಿಷ್ಠ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಒಂದು ಕಡೆ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಫೈನಲ್ ಫೈಟ್ಗೆ ತಯಾರಾಗಿದ್ದರೆ, ಮತ್ತೊಂದು ಕಡೆ ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್ ತಂಡ 16 ವರ್ಷಗಳ ಬಳಿಕ ಫೈನಲ್ನಲ್ಲಿ ಆಡಲು ದುಬೈಗೆ ಪ್ರಯಾಣ ಬೆಳೆಸಿದೆ. ಮಾರ್ಚ್ 9 ರಂದು ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶೇಷ ಅಂದರೆ 25 ವರ್ಷಗಳ ಬಳಿಕ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಐಸಿಸಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೆಣಸಾಡಲಿದ್ದಾರೆ. ಈ ಹಿಂದೆ 2000ರ ಆವೃತ್ತಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾದಾಗ ನ್ಯೂಜಿಲೆಂಡ್ ತಂಡ 4 ವಿಕೆಟ್ಗಳಿಂದ ಗೆದ್ದಿತ್ತು..
ಫೈನಲ್ಗೆ ಭಾರತ ಸಾಗಿ ಬಂದ ಹಾದಿ
ಬಾಂಗ್ಲಾದೇಶ ವಿರುದ್ದ 6 ವಿಕೆಟ್ಗಳ ಜಯ
ಪಾಕಿಸ್ತಾನ ವಿರುದ್ದ 6 ವಿಕೆಟ್ಗಳ ಜಯ
ನ್ಯೂಜಿಲೆಂಡ್ ವಿರುದ್ದ 44 ರನ್ಗಳ ಜಯ
ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ದ 4 ವಿಕೆಟ್ಗಳ ಜಯ

ಅಭಿಷೇಕ್.ಎಸ್