Ashwaveega News 24×7 ಮಾರ್ಚ್ 08 – 2026 : ಕ್ರಿಕೆಟ್ ಅಭಿಮಾನಿಗಳ ಕಾತರಕ್ಕೆ ಇಂದು ತೆರೆ ಬೀಳಲಿದೆ. ಐಸಿಸಿ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ . ವಿಶ್ವಕಪ್ ಟ್ರೋಫಿಗಾಗಿ ನಡೆಯುವ ಈ ಮಹತ್ವದ ಹಣಾಹಣಿಯನ್ನು ನೋಡಲು ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.
ಭಾರತ ತಂಡವನ್ನು ಹಾಟ್ ಫೇವರಿಟ್ ಎಂದು ಪರಿಗಣಿಸಲಾಗುತ್ತಿದ್ದರೆ, ನ್ಯೂಜಿಲೆಂಡ್ ತಂಡ ಡಾರ್ಕ್ ಹಾರ್ಸ್ ಆಗಿ ಅಚ್ಚರಿ ಮೂಡಿಸುವ ಸಾಧ್ಯತೆಯಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಈ ಫೈನಲ್ ಪಂದ್ಯದಲ್ಲಿ ಯಾವ ತಂಡದ ಪಾಲಿಗೆ ಅದೃಷ್ಟ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಇದಕ್ಕೆ ನಡುವೆ, ಬೆಂಗಳೂರು ನಗರದಲ್ಲೂ ವಿಶ್ವಕಪ್ ಫೈನಲ್ ಫೀವರ್ ಜೋರಾಗಿದೆ. ಪಂದ್ಯ ವೀಕ್ಷಿಸಲು ಅಪಾರ್ಟ್ಮೆಂಟ್ಸ್, ಗ್ರೌಂಡ್ಸ್ ಹಾಗೂ ಕ್ಲಬ್ಗಳಲ್ಲಿ ಬಿಗ್ ಎಲ್ಇಡಿ ಸ್ಕ್ರೀನ್ಗಳನ್ನು ಅಳವಡಿಸಲಾಗಿದೆ. ಜನಸಂದಣಿ ಹೆಚ್ಚಾಗುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಿದೆ.
ಎಲ್ಇಡಿ ಸ್ಕ್ರೀನ್ ಮೂಲಕ ಪಂದ್ಯ ವೀಕ್ಷಿಸುವ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಲಾಗಿದೆ.
