
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಯಂಡ ಯಾವುದೇ ಸೋಲಿಲ್ಲದೇ 5ನೇ ಬಾರಿ ಫೈನಲ್ ಪ್ರವೇಶಿಸಿದೆ. ಈ ಹಿಂದೆ 2000ರಲ್ಲಿ ಫೈನಲ್ ಪಂದ್ಯದಲ್ಲಿ ಭಾರತ ಸೋತು ರನ್ನರ್ ಅಪ್ ಆಗಿತ್ತು. 2002ರಲ್ಲಿ ಮತ್ತೆ ಫೈನಲ್ಗೆ ಎಂಟ್ರಿ ನೀಡಿದ್ದ ಭಾರತ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿತ್ತು. ಆದಾದ ಬಳಿಕ 2013ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದ ಭಾರತ ಇಂಗ್ಲೆಂಡ್ ತಂಡವನ್ನು ಮಣಿಸಿ ಮತ್ತೊಮ್ಮೆ ಚಾಂಪಿಯನ್ ಆಗಿತ್ತು. ಆದರೆ 2017ರಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನ ವಿರುದ್ದ ಸೋತಿತ್ತು, ಆ ನಂತರ ಚಾಂಪಿಯನ್ ಟ್ರೋಫಿ ಟೂರ್ನಿಯಲ್ಲಿ 5ನೇ ಬಾರಿಗೆ ಫೈನಲ್ಗೆ ಲಗ್ಗೆ ಇಟ್ಟಿದೆ. ವಿಶೇಷವೆಂದರೆ ಭಾರತ ಕಳೆದ 27 ವರ್ಷಗಳಿಂದ ಸೆಮಿಫೈನಲ್ ಹಂತದಲ್ಲಿ ಸೋಲಿಲ್ಲದ ಸರದಾರನ್ನಾಗಿ ತನ್ನ ಅಜೇಯ ದಾಖಲೆಯನ್ನು ಮುಂದುವರೆಸಿದೆ. 1998ರ ಚೊಚ್ಚಲ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಭಾರತ ಸೋತಿತ್ತು. ಆ ಬಳಿಕ ಸೆಮಿಫೈನಲ್ಗೇರಿದ ಪ್ರತಿಬಾರಿಯೀ ಪೈನಲ್ ತಲುಪಿದೆ. ಆದರೆ 2004,2006,2009 ನಡೆದ ಟೂರ್ನಿಯಲ್ಲಿ ಭಾರತ ಲೀಗ್ ಹಂತದಲ್ಲೇ ನಿರ್ಗಮಿಸಿತ್ತು.
ಫೈನಲ್ ಪಂದ್ಯ ಲಾಹೋರ್ನಿಂದ ದುಬೈಗೆ ಶಿಫ್ಟ್
ಪ್ರಸ್ತುತ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯವನ್ನು ಲಾಹೋರ್ ಅಥವಾ ದುಬೈ ಕ್ರೀಡಾಂಗಣವನ್ನು ಪಟ್ಟಿ ಮಾಡಲಾಗಿತ್ತು. ಒಂದು ವೇಳೆ ಭಾರತ ಫೈನಲ್ ಪ್ರವೇಶಿಸಿದರೆ ಪಂದ್ಯ ದುಬೈನಲ್ಲಿ ಹಾಗೂ ಇತರ ತಂಡಗಳು ಫೈನಲ್ ತಲುಪಿದರೆ ಲಾಹೋರ್ನಲ್ಲಿ ಪಂದ್ಯ ನಡೆಯಬೇಕಿತ್ತು. ಇದೀಗ ಭಾರತ ಫೈನಲ್ ತಲುಪಿರುವುದರಿಂದ ಪಂದ್ಯ ಮಾ.9ರಂದು ದುಬೈನಲ್ಲಿ ನಡೆಯಲಿದೆ.

ಅಭಿಷೇಕ್.ಎಸ್