
ಐಪಿಎಲ್ 2025 ಆವೃತ್ತಿಗೆ ಆಟಗಾರರು ತಂಡವನ್ನು ಸೇರಿಕೊಳ್ಲುತ್ತಿದ್ದು ಆರ್ಸಿಬಿಗೆ ತಂಡದ ಆಟಗಾರರು ಒಬ್ಬೊಬ್ಬರೇ ಸೇರಿಕೊಳ್ಳುತ್ತಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ಮಾರ್ಚ್ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆರ್ಸಿಬಿ ಅನ್ಬಾಕ್ಸ್ ಈವೆಂಟ್ ನಡೆಯಲಿದೆ. ಜೊತೆಗೆ ಆರ್ಸಿಬಿ ತಂಡ ಅಭ್ಯಾಸ ಶುರು ಮಾಡಬೇಕಾಗಿರುವುದರಿಂದ ಎಲ್ಲರೂ ತಂಡವನ್ನು ಕೂಡಿಕೊಳ್ಳುತ್ತಿದ್ದಾರೆ. ಯಶ್ ದಯಾಳ್, ಜಿತೇಶ್ ಶರ್ಮಾ, ಭುವನೇಶ್ವರ್ ಕುಮಾರ್, ಟಿಮ್ ಡೇವಿಡ್, ರೊಮರಿಯೋ ಶೆಫರ್ಡ್ ಹಾಗೂ ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಕೂಡ ತಂಡವನ್ನು ಸೇರಿಕೊಂಡಿದ್ದಾರೆ. ಮೆಗಾ ಹರಾಜಿನಲ್ಲಿ ಸಮತೋಲನ ತಂಡವನ್ನು ಕಟ್ಟಿರುವ ಬೆಂಗಳೂರು ತಂಡ ಈ ಬಾರಿ ಚೊಚ್ಚಲ ಪ್ರಶಸ್ತಿ ಗೆಲುವ ನಿರೀಕ್ಷೆಯಲ್ಲಿದೆ. ಕಳೆದ 17 ಸೀಸನ್ನಲ್ಲಿ ಹೋಲಿಕೆ ಮಾಡಿದರೆ ಈ ಬಾರಿ ಬೆಂಗಳೂರು ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸಮತೋಲನದಿಂದ ಕೂಡಿದೆ. ಹೀಗಾಗಿ ಪ್ಲೆ ಆಫ್ ತಲುಪುವ ಆಗ್ರ 4 ತಂಡಗಳಲ್ಲಿ ಆರ್ಸಿಬಿ ಕೂಡ ಒಂದಾಗಿರಲಿದೆ ಎಂದು ಕ್ರಿಕೆಟ್ ವಲಯದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಮಾರ್ಚ್ 22ರಂದು ಕೆಕೆಆರ್ ವಿರುದ್ದ ಆರ್ಸಿಬಿ ತನ್ನ ಮೊದಲ ಪಂದ್ಯ ಆಡಲಿದೆ.

ಅಭಿಷೇಕ್.ಎಸ್