
ಐಪಿಎಲ್ 2025ರ ಟೂರ್ನಿ ಮುಂದಿನ ವಾರದಿಂದ ಶುರುವಾಗಲಿದೆ. ಟೂರ್ನಿಗಾಗಿ ತಂಡಗಳು ಸಿದ್ದತೆ ಮಾಡಿಕೊಳ್ಳುತ್ತಿವೆ. ಆಟಗಾರರು ತಂಡವನ್ನು ಸೇರಿಕೊಳ್ಳುತ್ತಿದ್ದಾರೆ. ಈ ಬಾರಿಯ ಟೂರ್ನಿ ಮತ್ತೊಂದು ವಿಶೇಷತೆಗೆ ಸಾಕ್ಷಿಯಾಗಲಿದೆ. ಟೂರ್ನಿಯ ಭಾಗಿಯಾಗಲಿರುವ 10 ತಂಡೆಗಳ ಪೈಕಿ 9 ತಂಡಗಳಿಗೆ ಭಾರತೀಯರೇ ನಾಯಕರಾಗಿದ್ದಾರೆ. ಅದರಲ್ಲೂ ಕೆಲವು ತಂಡಗಳಿಗೆ ಮೊದಲ ಬಾರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಭವಿಷ್ಯದ ಭಾರತೀಯ ಕ್ರಿಕೆಟ್ನ ಗಮನದಲ್ಲಿ ನೋಡುವುದಾದರೆ 9 ಮಂದಿಗೆ ನಾಯಕತ್ವ ಪಟ್ಟ ನೀಡಿರುವುದು ಉತ್ತಮ ನಿರ್ಧಾರವೆಂದು ಕ್ರಿಕೆಟ್ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. 9 ತಂಡಗಳ ಪೈಕಿ 1 ತಂಡ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಮಾತ್ರ ವಿದೇಶಿ ನಾಯಕನ್ನಾಗಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮುಂದುವರೆದಿದ್ದಾರೆ.
5 ತಂಡಗಳಿಗೆ ಹೊಸ ಸಾರಥಿ
ಐಪಿಎಲ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲಕ್ನೋ ಸೂಫರ್ ಜೈಂಟ್ಸ್, ಡಿಫೆಂಡಿಂಗ್ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್, ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನೂತನ ನಾಯಕರನ್ನು ನೇಮಿಸಲಾಗಿದೆ.

- ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB ) – ರಜತ್ ಪಾಟಿದಾರ್
- ಚೆನ್ನೈ ಸೂಪರ್ ಕಿಂಗ್ಸ್ (CSK) – ರುತುರಾಜ್ ಗಾಯಕ್ವಾಡ್
- ಮುಂಬೈ ಇಂಡಿಯನ್ಸ್ ( MI) – ಹಾರ್ದಿಕ್ ಪಾಂಡ್ಯ
- ಪಂಜಾಬ್ ಕಿಂಗ್ಸ್ ( PBKS ) – ಶ್ರೇಯಸ್ ಅಯ್ಯರ್
- ಕೋಲ್ಕತ್ತಾ ನೈಟ್ ರೈಡರ್ಸ್ ( KKR ) – ಅಜಿಂಕ್ಯೆ ರಹಾನೆ
- ಲಕ್ನೋ ಸೂಪರ್ ಜೈಂಟ್ಸ್ ( LSG ) – ರಿಷಬ್ ಪಂತ್
- ರಾಜಸ್ಥಾನ್ ರಾಯಲ್ಸ್ ( RR) – ಸಂಜು ಸ್ಯಾಮ್ಸನ್
- ಗುಜರಾತ್ ಟೈಟಾನ್ಸ್ ( GT) ̲ ಶುಭ್ಮನ್ ಗಿಲ್
- ಸನ್ ರೈಸರ್ಸ್ ಹೈದಾರಾಬಾದ್ ( SRH ) – ಪ್ಯಾಟ್ ಕಮಿನ್ಸ್
- ಡೆಲ್ಲಿ ಕ್ಯಾಪಿಟಲ್ಸ್ ( DC) – ಅಕ್ಷರ್ ಪಟೇಲ್
ಅಭಿಷೇಕ್.ಎಸ್