
2025ರ ಐಪಿಎಲ್ ಟೂರ್ನಿಯಲ್ಲಿ ಎಸ್ಆರ್ಹೆಚ್ ಮೊದಲ ಸೋಲು ಕಂಡಿದೆ. ಬ್ಯಾಟಿಂಗ್ನಿಂದಲೇ ಎದುರಾಳಿಗಳಿಗೆ ತಲೆನೋವು ಆಗುತ್ತಿದ್ದ ಪ್ಯಾಟ್ ಕಮಿನ್ಸ್ ಪಡೆಯ ಆಟ ಲಕ್ನೋ ವಿರುದ್ದ ನಡೆಯಲಿಲ್ಲ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದ್ರಾಬಾದ್ ತಂಡ 20 ಓವರ್ಗಳಲ್ಲಿ 190 ರನ್ ಗಳಿಸಿತ್ತು. ಟ್ರಾವಿಸ್ ಹೆಡ್ (47), ಅಭಿಷೇಕ್ ಶರ್ಮಾ(06), ಇಶಾನ್ ಇಶಾನ್ (0), ನಿತಿಶ್ ರೆಡ್ಡಿ (32), ಕ್ಲಾಸನ್ (26), ಅಂಕಿತ್ ವರ್ಮಾ(36), ಅಭಿನವ್ ಮನೋಹರ್ (02), ಪ್ಯಾಟ್ ಕಮಿನ್ಸ್ (18), ಹರ್ಷಲ್ ಪಟೇಲ್(12) ರನ್ ಗಳಿಸಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಇಶಾನ್ ಕಿಸಾನ್ ಈ ಬಾರಿ ಡಕ್ ಔಟ್ ಆದರು. ಲಕ್ನೋ ತಂಡದ ಪರ ಶಾರ್ದೂಲ್ ಠಾಕೂರ್ 4 ವಿಕೆಟ್ ಪಡೆದರೆ, ಅವೇಸ್ ಖಾನ್, ರವಿ ಬಿಷ್ಣೋವಿ, ದಿಗ್ವೇಶ್ ಸಿಂಗ್, ಪ್ರಿನ್ಸ್ ಯಾದವ್ ತಲಾ 1 ವಿಕೆಟ್ ಪಡೆದಕೊಂಡರು. 191 ರನ್ಗಳ ಗುರಿ ಬೆನ್ನಟ್ಟಿದ ಲಕ್ನೋ ಮಿಚಲ್ ಮಾರ್ಷ್ (52), ನಿಕೋಲಸ್ ಪೂರನ್ (70), ನಾಯಕ ರಿಷಬ್ ಪಂತ್ (15) ಅಬ್ದುಲ್ ಸಮದ್ (22) ಡೇವಿಡ್ ಮಿಲ್ಲರ್ (13) ಅವರ ಜವಬ್ದಾರಿಯುತ ಅಟದಿಂದ 16.1 ಓವರ್ಗಳಲ್ಲಿಯೇ ಗುರಿ ಮುಟ್ಟಿತ್ತು. ಆ ಮೂಲಕ ಅತಿಥೇಯ ತಂಡಕ್ಕೆ ತವರಿನಲ್ಲೇ ಸೋಲಿನ ಅಘಾತ ನೀಡಿತ್ತು. ಹೈದರಾಬಾದ್ ಪರ ನಾಯಕ ಪ್ಯಾಟ್ ಕಮಿನ್ಸ್ 2, ಹರ್ಷಲ್ ಪಟೇಲ್ 1, ಆಡಂ ಝಂಪಾ 1, ಮೊಹಮ್ಮದ್ ಶಮಿ 1 ವಿಕೆಟ್ ಪಡೆದರು.

ಅಭಿಷೇಕ್.ಎಸ್