
19ನೇ ಓವರ್ 1 ರನ್ 2 ವಿಕೆಟ್, 20ನೇ ಓವರ್ ಹ್ಯಾಟ್ರಿಕ್ ಸಿಕ್ಸ್
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಆರ್ಸಿಬಿ 196 ರನ್ ದಾಟುವ ಅವಕಾಶ ತೀರಾ ಕಡಿಮೆಯಿತ್ತು. 18 ಓವರ್ಗಳ ಮುಕ್ತಾಯಕ್ಕೆ 176 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಆರ್ಸಿಬಿ 185 ರನ್ ಗಳಿಸಿದರೆ ಹೆಚ್ಚು ಎಂದು ಅಂದಾಜಿಸಲಾಗಿತ್ತು. ಅದರಂತೆ 19ನೇ ಓವರ್ ಬೌಲಿಂಗ್ ಮಾಡಿದ ಪತಿರಾಣ 1 ರನ್ ನೀಡಿ ಪ್ರಮುಖ 2 ವಿಕೆಟ್ ಕಿತ್ತು ಆರ್ಸಿಬಿ 180ರ ಒಳಗೆ ಕಟ್ಟಿ ಹಾಕುವ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಅಂತಿಮ ಓವರ್ ಎಸೆದ ಸ್ಯಾಮ್ ಕರನ್ ಟೀಮ್ ಡೇವಿಡ್ಗೆ ಮೊದಲ ಎರಡು ಎಸೆತಗಳನ್ನು ಡಾಟ್ ಬೌಲ್ ಮಾಡಿದರೆ, ಆದರೆ ಮುಂದಿನ 3 ಎಸೆತಗಳನ್ನು ಡೇವಿಡ್ ಸಿಕ್ಸ್ ಬಾರಿಸಿ ತಂಡದ ಮೊತ್ತವನ್ನು 196 ರನ್ಗಳಿಗೆ ಹೆಚ್ಚಿಸಿದರು. 275ರ ಸ್ಟ್ರೇಕ್ರೇಟ್ನೊಂದಿಗೆ ಬ್ಯಾಟ್ ಬೀಸಿದ ಡೇವಿಡ್ 8 ಎಸೆತಗಳಲ್ಲಿ 3 ಸಿಕ್ಸರ್, 1 ಪೋರ್ನೊಂದಿಗೆ 22 ರನ್ ಬಾರಿಸಿದರು.
ಪತಿರಾಣ ವಿರುದ್ದ ಸೇಡು ತೀರಿಸಿಕೊಂಡ ಕಿಂಗ್ ಕೊಹ್ಲಿ
ಆ ಸಮಯದಲ್ಲಿ ಆರ್ಸಿಬಿ ತಂಡ ಸಿಎಸ್ಕೆ ವಿರುದ್ದ ಉತ್ತಮ ಬ್ಯಾಟಿಂಗ್ ನಡೆಸುತಿತ್ತು. ಒಂದು ಕಡೆ ರಜತ್ ಪಾಟೀದಾರ್ ಎಂದಿನಂತೆ ತಮ್ಮ ಶೈಲಿಯಲ್ಲಿ ಬ್ಯಾಟ್ ಬೀಸುತ್ತಿದ್ದರು. ಆದರೆ ಕೊಹ್ಲಿ ಮಾತ್ರ ಆಕ್ರಮಣಕಾರಿ ಆಟಕ್ಕೆ ಹೋಗದೇ ತಾಳ್ಮೆಯ ಆಟವಾಡುತ್ತಿರುವಾಗ ಬೌಲ್ ಮಾಡಲು ಬಂದ ಪತಿರಾಣ ಮೊದಲ ಎಸೆತದಲ್ಲಿ ಶಾರ್ಟ್ ಬೌನ್ಸರ್ ಹಾಕಿದರು. ಚೆಂಡು ನೇರವಾಗಿ ಕೊಹ್ಲಿ ಎಲ್ಮೆಟ್ಗೆ ಬಡಿಯಿತ್ತು. ನಿಧಾನವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಕಿಂಗ್ ಕೊಹ್ಲಿ ಒಂದು ಕ್ಷಣ ಪತಿರಾಣ ಮೇಲೆ ರೊಚ್ಚಿಗೆದ್ದರು. ನಂತರ ಪತಿರಾಣ 2ನೇ ಬಾರಿಗೆ ಬೌನ್ಸರ್ ಎಸೆದಾಗ ಸಿಕ್ಸರ್ ಬಾರಿಸಿ ಕೊಹ್ಲಿ ಪತಿರಾಣ ವಿರುದ್ದ ಆಕ್ರಮಣಕಾರಿ ನೋಟ ಬೀರಿದರು. 3ನೇ ಎಸೆತದಲ್ಲೂ ಪೋರ್ ಬಾರಿಸಿ ಪತಿರಾಣ ಕಡೆ ನೋಡಿ ತಮ್ಮ ಶೈಲಿಯಲ್ಲಿ ಸಂಭ್ರಮಿಸಿದರು.

ಬೌಲಿಂಗ್ನಲ್ಲಿ ಕಮಾಲ್ ಮಾಡಿದ ಜೋಶ್
ಮೊದಲ ಪಂದ್ಯದ ಹಾಗೇ ಸಿಎಸ್ಕೆ ವಿರುದ್ದವೂ ಜೋಶ್ ಹ್ಯಾಜಲ್ವುಡ್ ಬಿಗುವಿನ ಬೌಲಿಂಗ್ ನಡೆಸಿದರು. ಮೊದಲ ಓವರ್ನಲ್ಲಿಯೇ ಸಿಎಸ್ಕೆಯ ರಾಹುಲ್ ತ್ರಿಪಾಠಿ ಹಾಗೂ ನಾಯಕ ರುತುರಾಜ್ ಗಾಯಕ್ವಾಡ್ ವಿಕೆಟ್ ಪಡೆದುಕೊಂಡರು. ನಂತರ ರವೀಂದ್ರ ಜಡೇಜಾ ಅವರ ವಿಕೆಟ್ ಕಿತ್ತರು. 4 ಓವರ್ ಭೌಲ್ ಮಾಡಿದ ಜೋಶ್ 5.2ರ ಎಕಾನಮಿಯಂತೆ 21 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿ ಆರ್ಸಿಬಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಭಿಷೇಕ್ ಎಸ್