Ashwaveega News 24×7 ಏಪ್ರಿಲ್ 12 – 2026 : ದಾವಣಗೆರೆ : ರಾಜಕೀಯ ವಲಯದಲ್ಲಿ ಮತ್ತೊಂದು ವಿವಾದಕ್ಕೆ ಕಾರಣವಾದ ಹೇಳಿಕೆಯನ್ನು ಸಚಿವ S. S. Mallikarjun ನೀಡಿದ್ದಾರೆ. ಎಂಎಲ್ಸಿ Abdul Jabbar ಕುರಿತು ಮಾತನಾಡಿದ ಅವರು, “ಅಬ್ದುಲ್ ಜಬ್ಬಾರ್ ಬುದ್ಧಿವಂತನಾ ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿ, ನಂತರ ಬಿದ್ದುಬಿದ್ದು ನಕ್ಕರು.
ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಿಕಾರ್ಜುನ್, “ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು. ನಾನು ಮತ್ತು ನಮ್ಮ ಅಪ್ಪಾಜಿ ಸೇರಿ ಅವರನ್ನು MLC ಮಾಡಿಸಿದ್ದೇವೆ” ಎಂದು ಹೇಳಿದ್ದಾರೆ.
ಇನ್ನಷ್ಟು ತೀವ್ರವಾಗಿ ಪ್ರತಿಕ್ರಿಯಿಸಿದ ಅವರು, “ಯಾರಾದರೂ ಒಂದು ಸಹಾಯ ಮಾಡಿದ್ರೆ, ಅದಕ್ಕೆ ಋಣ ಇಟ್ಟುಕೊಳ್ಳಬೇಕು. ಚಹಾ ಕುಡಿದ್ರೂ ಋಣ ಇಟ್ಟುಕೊಳ್ಳಬೇಕು” ಎಂದು ಹೇಳಿದ್ದಾರೆ.
“ಯಾರ ಮನೇಗಾದ್ರೂ ಆಗಲಿ, ಯಾರ ಬಳಿ ಆದರೂ ಆಗಲಿ ಸಹಾಯ ಪಡೆದಿದ್ದರೆ, ನಾವು ಸ್ವತಃ ಹೋಗಿ ಸಹಾಯ ಮಾಡಬೇಕು” ಎಂದು ನೈತಿಕತೆ ಕುರಿತು ಮಾತನಾಡಿದರು.
“ಪ್ರಚಾರಕ್ಕೆ ಅವರು ಕರೀಬೇಕು, ಇವರು ಕರೀಬೇಕು ಅನ್ನೋದಲ್ಲ. ಕೆಲಸಕ್ಕೆ ಬರದ ವಿಷಯಗಳನ್ನು ಹಿಡಿದು ಮಾತಾಡುತ್ತಾರೆ” ಎಂದು ಜಬ್ಬಾರ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ಈ ವಿವಾದದ ಬಗ್ಗೆ ಮುಂದಿನ ಕ್ರಮ ಕುರಿತು ಮಾತನಾಡಿದ ಮಲ್ಲಿಕಾರ್ಜುನ್, “ಕ್ರಮ ಕೈಗೊಳ್ಳುವುದು ವರಿಷ್ಠರ ವಿಷಯ, ಅದನ್ನು ಅವರಿಗೇ ಬಿಟ್ಟಿದ್ದೇವೆ” ಎಂದು ತಿಳಿಸಿದ್ದಾರೆ.
