
ಇಂದಿನಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯಲಿದೆ. ಪ್ರಶಸ್ತಿಗಾಗಿ 8 ತಂಡಗಳ ನಡುವೆ ಪೈಪೋಟಿ ಜರುಗಲಿದೆ. ಆದರೆ ಬಹುತೇಕ ಸ್ಟಾರ್ ಆಟಗಾರರಿಗೆ ಇದೇ ಕೊನೆಯ ಐಸಿಸಿ ಟೂರ್ನಿಯಾಗಲಿದೆ ಎಂದು ಹೇಳಲಾಗುತ್ತಿದೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್,ಬಾಬರ್ ಅಜಮ್, ಜೋ ರೂಟ್, ಕೇನ್ ವಿಲಿಯಮ್ಸನ್,ಡೇವಿಡ್ ಮಿಲ್ಲರ್ ಸೇರಿದಂತೆ ಹಲವು ಆಟಗಾರರಿಗೆ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯೇ ಅಂತಿಮವಾಗಿರಲಿದೆ. ಯಾಕೆಂದರೆ ಮುಂದಿನ ಏಕದಿನ ವಿಶ್ವಕಪ್ ಟೂರ್ನಿ ನಡೆಯುವುದು 2027ರಲ್ಲಿ ಆ ವೇಳೆಗೆ ಈ ಆಟಗಾರರಿಗೆಲ್ಲಾ ನಿವೃತ್ತಿ ವಯಸ್ಸು ಜೊತೆಗೆ ಫಾರ್ಮ್ನಲ್ಲಿ ಸ್ಥಿರತೆ ಹಾಗೂ ಫಿಟ್ನೆಸ್ ಕಾಪಾಡಿಕೊಳ್ಳುವುದು ಕಷ್ಟದ ಕೆಲಸ ಹೀಗಾಗಿ ಪ್ರಸ್ತುತ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯೇ ಅಂತಿಮವಾಗಿರಲಿದೆ ಎಂದು ಹೇಳಲಾಗುತ್ತಿದೆ. ಹಾಗೇನಾದರೂ ನಿಜವಾಗಿದ್ದಲ್ಲಿ ಕ್ರಿಕೆಟ್ ಲೋಕ ಕಂಡ ಶ್ರೇಷ್ಟ ಆಟಗಾರರನ್ನು ಕಣ್ತುಂಬಿಕೊಳ್ಳುವುದು ಇದೇ ಕೊನೆಯ ಸಲ..
ಅಭಿಷೇಕ್ ಎಸ್