
ಭಾರತ ತಂಡದ ಸ್ಟಾರ್ ಅಲ್ರೌಂಡರ್ ರವೀಂದ್ರ ಜಡೇಜಾ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 600 ವಿಕೆಟ್ ಕ್ಲಬ್ಗೆ ಸೇರಿಕೊಂಡಿದ್ದಾರೆ. ಈ ಮೂಲಕ 600 ವಿಕೆಟ್ ಪಡೆದ ಭಾರತದ 5ನೇ ಬೌಲರ್ ಎನ್ನಿಸಿಕೊಂಡಿದ್ದಾರೆ. ಈ ಮೊದಲು ಅನಿಲ್ ಕುಂಬ್ಳೆ (953), ಆರ್ ಅಶ್ವಿನ್ (765), ಹರ್ಭಜನ್ ಸಿಂಗ್ (707), ಕಪಿಲ್ ದೇವ್ (687) ವಿಕೆಟ್ ಪಡೆದ ಇತರ ಭಾರತೀಯ ಬೌಲರ್ಗಳಾಗಿದ್ದಾರೆ.

ಈ ಸಾಧನೆ ಜೊತೆಗೆ ಜಡೇಜಾ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 6000 ಸಾವಿರ ರನ್ ಗಳಿಸುವುದರ ಜೊತೆಗೆ 600 ವಿಕೆಟ್ ಪಡೆದ ಭಾರತದ 2ನೇ ಆಟಗಾರ ಹಾಗೂ ವಿಶ್ವದ 6ನೇ ಆಟಗಾರ ಎನ್ನಿಸಿಕೊಂಡಿದ್ದಾರೆ. ನೆನ್ನೆ ಇಂಗ್ಲೆಂಡ್ ವಿರುದ್ದ ನಡೆದ ಪಂದ್ಯದಲ್ಲಿ ಜಡೇಜಾ 9 ಓವರ್ ಬೌಲಿಂಗ್ ಮಾಡಿ 26 ರನ್ ಗಳಿಸಿ 3 ವಿಕೆಟ್ ಕಬಳಿಸಿದ್ದರು. ಬ್ಯಾಟಿಂಗ್ನಲ್ಲೂ ಸಹ 12 ರನ್ ಗಳಿಸಿ ತಂಡವನ್ನು ಜಯದ ದಡಕ್ಕೆ ಸೇರಿಸಿದರು. ರವೀಂದ್ರ ಜಡೇಜಾ ಐಪಿಎಲ್ನಲ್ಲಿ ಸಿಎಸ್ಕೆ ಪರ ಆಡುತ್ತಿದ್ದು ಬ್ಯಾಟಿಂಗ್ ಬೌಲಿಂಗ್ ಹಾಗೂ ಫೀಲ್ಡಿಂಗ್ನಲ್ಲೂ ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದಾರೆ.

ಅಭಿಷೇಕ್ . ಎಸ್