Ashwaveega News 24×7 ಜನವರಿ 15 – Jaggesh prediction on Gilli Nata – ‘ಕಾಮಿಡಿ ಕಿಲಾಡಿಗಳು’ ವೇದಿಕೆಯಲ್ಲಿ ನಟ, ನವರಸ ನಾಯಕ ಜಗ್ಗೇಶ್ ಅವರು ಗಿಲ್ಲಿ ನಟನ ಬಗ್ಗೆ ಹೇಳಿದ್ದ ಭವಿಷ್ಯ ನಿಜವಾಗಿದೆ. ಬಿಗ್ ಬಾಸ್ ನಂತರ ಗಿಲ್ಲಿ ಸೋಷಿಯಲ್ ಮೀಡಿಯಾದಲ್ಲಿ 1 ಲಕ್ಷದಿಂದ 13 ಲಕ್ಷ ಫಾಲೋವರ್ಸ್ ಹೊಂದಿದ್ದು, ಅಪಾರ ಜನಪ್ರಿಯತೆ ಗಿಟ್ಟಿಸಿದ್ದಾರೆ. ನಟ ಜಗ್ಗೇಶ್ ಹೇಳಿದಂತೆ ಈಗ ಬಾಡಿಗಾರ್ಡ್ ಇಟ್ಟುಕೊಂಡು ಓಡಾಡಬೇಕಾದ ಪರಿಸ್ಥಿತಿ ಗಿಲ್ಲಿ ನಟನಿಗೆ ಎದುರಾಗಿದೆ. ಏಕೆಂದ್ರೆ ದೊಡ್ಮನೆಗೆ ಪ್ರವೇಶಿಸಿದ ನಂತರ ಗಿಲ್ಲಿ ನಟ ಸಖತ್ ಪ್ಯಾಪುಲರ್ ಆಗಿದ್ದಾರೆ.
‘ಕಾಮಿಡಿ ಕಿಲಾಡಿಗಳು’ ವೇದಿಕೆಗೆ ಜಗ್ಗೇಶ್ ಅವರು ಜಡ್ಜ್ ಸ್ಥಾನದಲ್ಲಿದ್ದರು. ವೇದಿಕೆ ಮೇಲೆ ಗಿಲ್ಲಿ ಕೂಡ ಇದ್ದರು. ಆ ಸಂದರ್ಭದಲ್ಲಿ ಮಾತನಾಡಿದ್ದ ಜಗ್ಗೇಶ್ ಅವರು, ‘ಮುಂದಿನ ವರ್ಷ ಇಷ್ಟು ಹೊತ್ತಿಗೆ ಚತ್ರಿ ಹಿಡಿಯೋಕೆ ಒಬ್ಬರನ್ನು ಇಟ್ಟುಕೊಂಡು, ಬಾಡಿಗಾರ್ಡ್ನ ಹಾಕಿಕೊಂಡು ಓಡಾಡುವ ಮಟ್ಟಕ್ಕೆ ಈತ ಬೆಳೆಯುತ್ತಾನೆ’ ಎಂದು ಗಿಲ್ಲಿ ಬಗ್ಗೆ ಜಗ್ಗೇಶ್ ಹೇಳಿದ್ದರು. ಅದು ಈಗ ನಿಜವಾಗಿದೆ.
