Ashwaveega News 24×7 ಜನವರಿ 17 – BIG BOSS – ರಿಯಾಲಿಟಿ ಶೋ ಸ್ಪರ್ಧಿ ಗಿಲ್ಲಿ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಜೋರಾಗಿದೆ. ಈ ಮಧ್ಯೆ ಆಂಕರ್ ಹಾಗೂ ನಟಿ ಜಾಹ್ನವಿ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
‘ನಾನು ಗಿಲ್ಲಿಗೆ ವೋಟ್ ಮಾಡಲ್ಲ’ ಎಂದು ಜಾಹ್ನವಿ ಹೇಳಿರುವುದು ಗಿಲ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹೇಳಿಕೆಯ ಬಳಿಕ ಜಾಹ್ನವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಸಂದೇಶಗಳು ಬರುತ್ತಿರುವುದಾಗಿ ಅವರು ತಿಳಿಸಿದ್ದಾರೆ.
“ನೀವೇನಾದ್ರೂ ಈ ಸ್ಪರ್ಧಿನಾ ಗೆಲ್ಲಿಸಿಲ್ಲ ಅಂದ್ರೆ ಸುಟ್ಟಾಕಿ ಬಿಡ್ತೀವಿ, ಹಾಗೆ ಮಾಡ್ತೀವಿ, ಹೀಗೆ ಮಾಡ್ತೀವಿ ಅಂತ ಹೆದರಿಸುತ್ತಿದ್ದಾರೆ. ಆದರೆ ನನ್ನ ಹತ್ರ ಇವೆಲ್ಲಾ ವರ್ಕ್ ಆಗಲ್ಲ” ಎಂದು ಜಾಹ್ನವಿ ಸ್ಪಷ್ಟವಾಗಿ ಹೇಳಿದ್ದಾರೆ.
ಇಂತಹ ಧಮ್ಕಿ ಹಾಗೂ ಬೆದರಿಕೆಗಳಿಂದ ಯಾವುದೇ ಸ್ಪರ್ಧಿಗೆ ಪಾಸಿಟಿವ್ ಪರಿಣಾಮ ಆಗಲ್ಲ, ಬದಲಾಗಿ ನೆಗೆಟಿವ್ ಪರಿಣಾಮವೇ ಆಗುತ್ತದೆ ಎಂದು ಜಾಹ್ನವಿ ಹೇಳಿದ್ದಾರೆ . “ಇದನ್ನೆಲ್ಲಾ ನೋಡಿ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ” ಎಂದು ಅವರು ಪರೋಕ್ಷವಾಗಿ ಗಿಲ್ಲಿ ಅಭಿಮಾನಿಗಳ ವಿರುದ್ಧ ಟಾಂಗ್ ನೀಡಿದ್ದಾರೆ.
ಜಾಹ್ನವಿ ಹೇಳಿಕೆಯ ಬಳಿಕ ಗಿಲ್ಲಿ ಅಭಿಮಾನಿಗಳು ಹಾಗೂ ಅವರ ಬೆಂಬಲಿಗರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ವಾದ ತೀವ್ರಗೊಂಡಿದ್ದು, ಈ ವಿಚಾರ ಇದೀಗ ‘ಸೋಷಿಯಲ್ ಮೀಡಿಯಾ ವಾರ್’ ಆಗಿ ಮಾರ್ಪಟ್ಟಿದೆ.
