Ashwaveega News 24×7 ಮಾರ್ಚ್ 15 – 2026 : ಅಮೆರಿಕದ ಕ್ಯಾಲಿಫೋರ್ನಿಯಾದ Fremont ನಗರದಲ್ಲಿ ಇರುವ ಭಾರತೀಯ ಒಡೆತನದ ಜ್ಯುವೆಲರಿ ಅಂಗಡಿಯಲ್ಲಿ ನಡೆದ ಭಾರೀ ದರೋಡೆ ಪ್ರಕರಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ .
Kumar Jewelers ಎಂಬ ಜ್ಯುವೆಲರಿ ಶಾಪ್ನಲ್ಲಿ ದುಷ್ಕರ್ಮಿಗಳು ಕೇವಲ ಒಂದು ನಿಮಿಷದೊಳಗೆ ಸುಮಾರು 1.7 ಮಿಲಿಯನ್ ಡಾಲರ್ (ಸುಮಾರು ₹15 ಕೋಟಿ) ಮೌಲ್ಯದ ಆಭರಣಗಳನ್ನು ಕಳವು ಮಾಡಿದ್ದಾರೆ .
ದುಷ್ಕರ್ಮಿಗಳು ಅಂಗಡಿಗೆ ನುಗ್ಗಿ ಅಲ್ಲಿ ಇದ್ದ ಶೇ.75ರಷ್ಟು ಆಭರಣಗಳನ್ನು ಕ್ಷಣಾರ್ಧದಲ್ಲಿ ಕದ್ದುಕೊಂಡು ಪರಾರಿಯಾಗಿದ್ದಾರೆ. ಕಳ್ಳತನ ನಡೆದ ಸಂಪೂರ್ಣ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ.
ಈ ಘಟನೆ 2025ರ ಜೂನ್ 18ರಂದು ನಡೆದಿದ್ದು, ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ದರೋಡೆ ಘಟನೆ ಅಮೆರಿಕದಲ್ಲಿರುವ ಭಾರತೀಯ ಉದ್ಯಮಿಗಳಲ್ಲಿ ಆತಂಕ ಮೂಡಿಸಿದೆ.
