Ashwaveega News 24×7 ಫೆಬ್ರವರಿ 07 -2026 – ಬೆಂಗಳೂರು : ಮುಂದಿನ ಜಿಬಿಎ ಚುನಾವಣೆಗೆ ಬಿಜೆಪಿ ಕಮಲ ಪಡೆ ಸಂಪೂರ್ಣ ಸಿದ್ಧತೆಯೊಂದಿಗೆ ಅಖಾಡಕ್ಕಿಳಿದಿದೆ. ಜಿಬಿಎ ಚುನಾವಣಾ ಅಖಾಡಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿರುವ ಬಿಜೆಪಿ, ಚುನಾವಣಾ ಉಸ್ತುವಾರಿಯನ್ನು ನೇಮಿಸಿ ತಂತ್ರ ರೂಪಿಸುವ ಕೆಲಸಕ್ಕೆ ವೇಗ ನೀಡಿದೆ .
ಬಿಜೆಪಿಯ ಜಿಬಿಎ ಚುನಾವಣಾ ಉಸ್ತುವಾರಿಯಾಗಿ ರಾಷ್ಟ್ರೀಯ ನಾಯಕ ರಾಮ್ ಮಾಧವ್ ಅವರನ್ನು ನೇಮಿಸಲಾಗಿದ್ದು, ಅವರು ರಾಜ್ಯಕ್ಕೆ ಆಗಮಿಸಿದ ಬೆನ್ನಲ್ಲೇ ಚಟುವಟಿಕೆ ಚುರುಕುಗೊಂಡಿದೆ. ರಾಮ್ ಮಾಧವ್ ಅವರು ರಾಜ್ಯ ಬಿಜೆಪಿ ನಾಯಕರೊಂದಿಗೆ ಬ್ಯಾಕ್ ಟು ಬ್ಯಾಕ್ ಸಭೆಗಳನ್ನು ನಡೆಸಿದ್ದು, ಚುನಾವಣಾ ತಂತ್ರ ರೂಪಿಸುವ ಕುರಿತಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ .
ಈ ಸಭೆಗಳಲ್ಲಿ ಬಿಜೆಪಿ ಶಾಸಕರು, ಸಂಸದರು ಭಾಗವಹಿಸಿದ್ದು, ಆಡಳಿತ ಪಕ್ಷದ ತಂತ್ರಗಳಿಗೆ ಯಾವ ರೀತಿಯಲ್ಲಿ ಪ್ರತಿತಂತ್ರ ರೂಪಿಸಬೇಕು ಎಂಬುದರ ಬಗ್ಗೆ ವಿವರವಾದ ಚರ್ಚೆ ನಡೆದಿದೆ . ಜಿಬಿಎ ಚುನಾವಣೆಯನ್ನು ಗಂಭೀರವಾಗಿ ಎದುರಿಸಲು ಪಕ್ಷ ಸಂಘಟನೆ , ಅಭ್ಯರ್ಥಿಗಳ ಆಯ್ಕೆ ಮತ್ತು ಮೈದಾನ ಮಟ್ಟದ ಕಾರ್ಯತಂತ್ರಗಳ ಮೇಲೆ ಹೆಚ್ಚಿನ ಒತ್ತಡ ನೀಡಲಾಗಿದೆ .
ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದು, ಜಿಬಿಎ ಚುನಾವಣೆಯನ್ನು ಬಿಜೆಪಿ ಪಾಲಿಗೆ ಮಹತ್ವದ ರಾಜಕೀಯ ವೇದಿಕೆಯಾಗಿಸುವ ಉದ್ದೇಶವನ್ನು ಪಕ್ಷ ಸ್ಪಷ್ಟಪಡಿಸಿದೆ .
ಒಟ್ಟಾರೆ, ಜಿಬಿಎ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ, ಈಗಾಗಲೇ ಪೂರ್ಣ ಪ್ರಮಾಣದ ತಯಾರಿಯಲ್ಲಿ ತೊಡಗಿದ್ದು, ಮುಂದಿನ ದಿನಗಳಲ್ಲಿ ಕಮಲ ಪಡೆ ಚಟುವಟಿಕೆಗಳು ಇನ್ನಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ .
