Ashwaveega News 24×7 ಮಾರ್ಚ್ 08 – 2026 : ತೆಲುಗು ನಟ Jr. NTR ಬೆಂಗಳೂರಿನ Bangalore ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ಅಸಾಧಾರಣ ಹುಚ್ಚಾಟವನ್ನು ಸೃಷ್ಟಿಸಿದ್ದಾರೆ. ಆಸ್ಪತ್ರೆ ಉದ್ಘಾಟನೆಗಾಗಿ ಬೆಂಗಳೂರಿಗೆ ಬಂದಿದ್ದ ಜ್ಯೂ. ಎನ್ಟಿಆರ್ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಮುಗಿಬಿದ್ದಿದ್ದರು.
ಅಭಿಮಾನಿಗಳು “ಸಿಎಂ ಸಿಎಂ” ಎಂದು ಕೂಗುತ್ತಾ, ನಟನನ್ನು ನೇರವಾಗಿ ನೋಡಲು ಆಸ್ಪತ್ರೆ ಒಳಗೆ ನುಗ್ಗಿದ ಸಂದರ್ಭವೇ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸ್ ಪಡೆ ಹರಸಾಹಸ ಮಾಡಬೇಕಾಯಿತು . ಹುಚ್ಚಾಟ ಮೆರೆದ ಅಭಿಮಾನಿಗಳಿಗೆ ಲಾಠಿ ಚಾರ್ಜ್ ನಡೆದಿದ್ದು, ಘಟನೆ ಸ್ಥಳದಲ್ಲಿ ತೀವ್ರ ಉದ್ವಿಗ್ನತೆ ಮೂಡಿಸಿದೆ. ಇದರಿಂದ ಜ್ಯೂ. ಎನ್ಟಿಆರ್ ಅಭಿಮಾನಿಗಳ ಹಂಗಾಮಿ ಶಕ್ತಿ ಮತ್ತು ಘಟನಾಸ್ಥಳದ ಭಾರೀ ಜನಸಂದಣಿಯನ್ನು ಚಿತ್ರಿಸುತ್ತದೆ .
