Ashwaveega News 24×7 ಫೆಬ್ರವರಿ 06 -2026 – ಬೆಂಗಳೂರು : ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಇಲ್ಲ ಸಲ್ಲದ ಆರೋಪ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದ ಕನಕಪುರ ಶ್ರೀನಿವಾಸ್ ವಿರುದ್ಧ ಇದೀಗ ಡಿಕೆ ಶಿಷ್ಯ ಸೂರ್ಯ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇನ್ನೊಮ್ಮೆ ನಮ್ಮ ನಾಯಕ ಡಿಕೆ ಬಗ್ಗೆ ಮಾತನಾಡಿದ್ರೆ ಹುಷಾರ್” ಎಂದು ಸಾರ್ವಜನಿಕವಾಗಿ ಓಪನ್ ವಾರ್ನಿಂಗ್ ನೀಡಿದ್ದಾರೆ.
ಕನಕಪುರ ಶ್ರೀನಿವಾಸ್ ಡಿಕೆ ಶಿವಕುಮಾರ್ ಬಗ್ಗೆ ನೀಡಿದ್ದ ಹೇಳಿಕೆಗಳಿಗೆ ಕಿಡಿಕಾರಿದ ಶಿಷ್ಯಸೂರ್ಯ,“ನಮ್ಮ ನಾಯಕ ಹಗಲು – ರಾತ್ರಿ ಕಷ್ಟಪಟ್ಟು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಡಿಕೆ ಸಾಹೇಬ್ರ ತ್ಯಾಗ ಏನು ಅಂತ ನಿನಗೆ ಗೊತ್ತಾ?” ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ, ಕನಕಪುರ ಶ್ರೀನಿವಾಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಅವರು ಕನಕಪುರದವನಾಗಲು ಕೂಡ ನಿನಗೆ ಯೋಗ್ಯತೆ ಇಲ್ಲ . ನಿನ್ನಂತಹವರಿಂದಲೇ ಸಿನಿಮಾ ಕ್ಷೇತ್ರ ಹಾಳಾಗಿದೆ” ಎಂದು ಕಠಿಣ ಪದಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಕೆ ಶಿವಕುಮಾರ್ ವಿರುದ್ಧ ವೈಯಕ್ತಿಕ ದಾಳಿ ಹಾಗೂ ಅವಹೇಳನಕಾರಿ ಮಾತುಗಳನ್ನು ಆಡಿರುವುದು ಅಸಹನೀಯ ಎಂದು ಹೇಳಿದ ಶಿಷ್ಯಸೂರ್ಯ, ನಮ್ಮ ನಾಯಕನ ಬಗ್ಗೆ ಮಾತನಾಡುವ ಮುನ್ನ ನಾಲಿಗೆ ನಿಗ್ರಹಿಸಬೇಕು” ಎಂದು ಎಚ್ಚರಿಕೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಬಗ್ಗೆ ನೀಡಿರುವ ಹೇಳಿಕೆಗಳಿಂದಲೇ ಈ ವಿವಾದ ಭುಗಿಲೆದ್ದಿದ್ದು, ಕನಕಪುರ ರಾಜಕೀಯ ಹಾಗೂ ಚಿತ್ರರಂಗದ ವಲಯದಲ್ಲೂ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಈ ವಾಗ್ವಾದ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
