Ashwaveega News 24×7 ಮಾರ್ಚ್ 09 – 2026 : ಬೆಂಗಳೂರು : ನಟ Darshan Thoogudeepa ಪರವಾಗಿ ಕನ್ನಡಪರ ಸಂಘಟನೆಗಳು ರಣಕಹಳೆ ಊದಿವೆ. ನಟನ ಪರವಾಗಿ ಬೆಂಬಲ ಸೂಚಿಸಲು ಮಾರ್ಚ್ 11ರಂದು ಬೆಂಗಳೂರಿನಲ್ಲಿ ಭಾರೀ ಪ್ರತಿಭಟನೆ ನಡೆಸುವುದಾಗಿ ಸಂಘಟನೆಗಳು ಘೋಷಿಸಿವೆ.
ನಗರದ ಗಾಂಧಿನಗರದಲ್ಲಿರುವ Kanishka Hotel ಮುಂಭಾಗದ ಪಾರ್ಕ್ನಲ್ಲಿ ಪ್ರತಿಭಟನಾಕಾರರು ಸೇರಿಕೊಳ್ಳುವಂತೆ ಕರೆ ನೀಡಲಾಗಿದೆ. ಅಲ್ಲಿಂದ ಬೃಹತ್ ಜಾಥಾ ರೂಪದಲ್ಲಿ Freedom Park ವರೆಗೆ ಮೆರವಣಿಗೆ ನಡೆಸಲು ಯೋಜಿಸಲಾಗಿದೆ .
ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಟ ದರ್ಶನ್ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳಿಗೆ ಮನವಿ ಮಾಡಲಾಗಿದೆ. ಪೊಲೀಸರ ಅನುಮತಿ ದೊರಕಿದರೂ ಅಥವಾ ದೊರಕದಿದ್ದರೂ ಪ್ರತಿಭಟನೆ ನಡೆಸುವುದು ಖಚಿತ ಎಂದು ಹೋರಾಟಗಾರರು ಹೇಳಿದ್ದಾರೆ.
ಕನ್ನಡ ಪರ ಹೋರಾಟಗಾರ Nataraj Bommasandra ಈ ಕುರಿತು ಕರೆ ನೀಡಿದ್ದು, ದರ್ಶನ್ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
