ಸ್ಯಾಂಡಲ್ವುಡ್ನ ಹಲವು ನಟಿಯರು ವಿಂಟೇಜ್ ಸೀರೆಯನ್ನ ಉಟ್ಟು ಖುಷಿಪಟ್ಟಿದ್ದಾರೆ. ಆ ಸಾಲಿಗೆ ಕಾಂತಾರ ಚೆಲುವೆ ಸಪ್ತಮಿ ಗೌಡ ಕೂಡ ಇದೀಗ ಸೇರಿದ್ದಾರೆ. ಅಜ್ಜಿಯ ಸೀರೆ….ಅಮ್ಮನ ಸೀರೆ…ಅತ್ತೆಯ ಸೀರೆ ಹೀಗೆ ಸೀರೆಗಳ ಬಗ್ಗೆ ವಿಶೇಷ ಸೆಳೆತ ಇರೋ ಹೆಣ್ಣುಮಕ್ಕಳು ಸದಾ ಸೀರೆಯನ್ನ ಪ್ರೀತಿಸುತ್ತಾರೆ. ಅದನ್ನ ಬಿಂಬಿಸೋ ರೀತಿಯಲ್ಲಿಯೇ ಆ ಹಳೆ ಸೀರೆಗಳನ್ನ ಸಪ್ತಮಿ ಗೌಡ ಇದೀಗ ಪ್ರಮೋಟ್ ಮಾಡಿದ್ದಾರೆ. ವಿಂಟೇಜ್ ಸೀರೆಗಳ ಕಲೆಕ್ಷನ್ಗಾಗಿಯೇ ಇದೀಗ ಮಾಡಲ್ ಆಗಿದ್ದಾರೆ. ವಿಂಟೇಜ್ ಸೀರೆಯುಟ್ಟು ಒಂದಷ್ಟು ಫೋಟೋಗಳನ್ನ ಕೂಡ ತೆಗೆಸಿಕೊಂಡಿದ್ದಾರೆ. ಆ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವುಗಳನ್ನ ನೋಡಿರೋ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ವಿಂಟೇಜ್ ಸೀರೆಗಳ ಬಗ್ಗೆ ಒಂದು ಸೆಳೆತ ಇದ್ದೇ ಇರುತ್ತದೆ. ಆ ಸೆಳೆತವನ್ನ Nerige Story ತುಂಬಾನೆ ಚೆನ್ನಾಗಿಯೇ ಮಾಡುತ್ತಿದೆ. ಇದೊಂದು ಸಾರಿಯ ಬ್ಯಾಂಡ್ ಆಗಿದೆ. ಆದರೆ, ಕನ್ನಡದ ನಟಿಯರ ಮೂಲಕವೇ ವಿಂಟೇಜ್ ಸೀರೆಯಗಳನ್ನ ಪ್ರಮೋಟ್ ಮಾಡುತ್ತಲೇ ಬಂದಿದೆ. ಆ ನಟಿಯರಲ್ಲಿ ಇದೀಗ ನಟಿ ಸಪ್ತಮಿ ಗೌಡ ಈ ಸಲ ವಿಂಟೇಜ್ ಸೀರೆಯನ್ನು ಉಟ್ಟು ಖುಷಿಪಟ್ಟಿದ್ದಾರೆ. ಈ ಮೂಲಕ ಸೀರೆಯ ಸೆಳೆತವನ್ನ ಮತ್ತಷ್ಟು ಹೆಚ್ಚಿಸಿದ್ದಾರೆ ಅಂತಲೂ ಹೇಳಬಹುದು. ಹಾಗೆ ಈ ಸೀರೆಗಳ ಮಹತ್ವ ಸಾರೋಕೆ ಇಲ್ಲೊಂದು ಪುಟ್ಟ ಕಥೆಯನ್ನೂ ಕೂಡ ಕಟ್ಟಿಕೊಡಲಾಗಿದೆ.
ವಿಂಟೇಜ್ ಸೀರೆಯ ಮಹತ್ವ ಹೇಳೋಕೆ ಇಲ್ಲೊಂದು ಸಣ್ಣ ಕಥೆಯನ್ನು ಕಟ್ಟಿಕೊಡಲಾಗಿದೆ. ಪೋಸ್ಟ್ ಮ್ಯಾನ್ ಪತ್ರ ತಂದು ಕೊಡ್ತಾನೆ. ಆ ಲೆಟರ್ ಅನ್ನ ಸಪ್ತಮಿ ಗೌಡ ಓದುತ್ತಾರೆ. ಓದುತ್ತಲೇ ಪತ್ರದಲ್ಲಿರೋ ಅಷ್ಟು ಭಾವನೆಗಳನ್ನ ಕಲ್ಪಿಸಿಕೊಳ್ಳುತ್ತಾರೆ. ಹಳೆ ಪಟ್ಟಿಗೆಯಲ್ಲಿ ಇರೋ ತುಂಬಾ ಚೆಂದದ ಒಂದು ಸೀರಿಯುಟ್ಟು ಖುಷಿ ಪಡುತ್ತಾರೆ. ಈ ಒಂದು ಕಲ್ಪನೆಯಲ್ಲಿ ತೇಲುತ್ತಿರೋವಾಗ್ಲೇ ಬಾಗಿಲ ಬಡಿದ ಸದ್ದು ಆಗುತ್ತದೆ. ಆ ಫೋಸ್ಟ್ಮ್ಯಾನ್ ಹೇಳ್ತಾನೆ. ರಾಂಗ್ ಅಡ್ರೆಸ್ಗೆ ಪತ್ರ ಕೊಟ್ಟು ಹೋಗಿದ್ದೇನೆ. ವಾಪಾಸ್ ಕೊಡಿ ಎಂದು ಪತ್ರ ತೆಗೆದುಕೊಂಡು ಹೋಗ್ತಾನೆ. ಅಲ್ಲಿಗೆ ಈ ಸೀರೆಯ ಪುಟ್ಟ ಸ್ಟೋರಿ ಎಂಡ್ ಆಗುತ್ತಾರೆ.
ಸ್ಟೋರಿ ಎಂಡ್ ಆದ ನಂತರ ಸಪ್ತಮಿ ಗೌಡ ಸೀರೆಯುಟ್ಟು ತುಂಬಾನೆ ಚೆನ್ನಾಗಿ ಕಾಣಿಸುತ್ತಿದ್ದಾರೆ. ವಿಂಟೇಜ್ ಸೀರೆಯುಟ್ಟು ಖುಷಿನೂ ಪಟ್ಟಿದ್ದಾರೆ. ತಮಗೆ ಇಷ್ಟವಾದ ರೀತಿಯಲ್ಲಿ ಸೀರೆಯುಟ್ಟು ವಾಕ್ ಕೂಡ ಮಾಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲೂ ಓಡಾಡಿದ್ದಾರೆ. ತುಂಬಾನೆ ಚಂದ ಅನಿಸೋ ಜಾಗದಲ್ಲಿ ನಿಂತು ಒಂದಷ್ಟು ಫೋಟೋ ಕೂಡ ತೆಗೆಸಿಕೊಂಡಿದ್ದಾರೆ. ಇದೇ ರೀತಿನೇ ಈ ಹಿಂದೆ ಮೇಘನಾ ಗಾಂವ್ಕರ್ ವಿಂಟೇಜ್ ಸೀರೆಯನ್ನ ಉಟ್ಟುಕೊಂಡಿದ್ದರು. ಸೀರೆಯುಟ್ಟು ಖುಷಿಪಟ್ಟಿದ್ದರು. ಹಾಗೇನೆ ಒಂದು ಸೀರೆ ಕಥೆಯನ್ನೂ ವಿಡಿಯೋ ಮೂಲಕ ಹೇಳಿದ್ದರು. ಅದು ಇದೀಗ ಮುಂದುವರೆದಿದ್ದೆ. ಸಪ್ತಮಿ ಗೌಡ ಈಗ ಆ ಒಂದು ಕೆಲಸ ಮಾಡಿದ್ದಾರೆ.
ಸಪ್ತಮಿ ಗೌಡ ತಮ್ಮ ಈ ವಿಶೇಷ ಫೋಟೋ ಶೂಟ್ನ ಫೋಟೋಗಳನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಈ ಫೋಟೋಗಳನ್ನ ನೋಡಿ ಫ್ಯಾನ್ಸ್ ಒಳ್ಳೆ ಮಾತುಗಳನ್ನ ಬರೆದಿದ್ದಾರೆ. ಸೂಪರ್ ಅಕ್ಕ ಅಂತ ಅದ್ಯಾರೋ ಹೇಳಿದ್ದಾರೆ. ಮತ್ಯಾರೋ ಬ್ಯೂಟಿಫುಲ್ ಅಂತ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ನೋಡಿದ್ರೆ, ಮೈಸೂರು ನೋಡಿದ ಹಾಗೇನೆ ಆಗುತ್ತದೆ ಅಂತ ಇನ್ಯಾರೋ ಹೇಳಿದ್ದಾರೆ. ಒಟ್ಟಾರೆ, ಸಪ್ತಮಿ ಗೌಡ ಅವರ ಈ ಒಂದಷ್ಟು ಫೋಟೋಗಳು ಹೆಚ್ಚಾಗಿ ಎಲ್ಲರಿಗೂ ಇಷ್ಟ ಆಗಿವೆ ಅಂತಲೇ ಹೇಳಬಹುದು.