Ashwaveega News 24×7 – ಜನವರಿ 10 ಹಾವೇರಿ : ಕೇರಳದಲ್ಲಿ ನಡೆಯಲಿರುವ ಚುನಾವಣೆ ದೃಷ್ಟಿಯಿಂದ ಅಲ್ಲಿನ ಸಿಎಂ ಪೀಣರಾಯಿ ಕನ್ನಡ ಶಾಲೆಗಳಲ್ಲಿ ಮಲಯಾಳಂ ಹೇರಲು ಹೋರಟಿದ್ದಾರೆ ಎಂದು ಕನ್ನಡ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವನಲ್ಲಿ ಮಾತನಾಡಿದ ಅವರು ಈ ಮಸೂದೆಗೆ ಯಾವುದೇ ಜಯ ಸಿಗುವದಿಲ್ಲ ಎಂದು ತಿಳಿಸಿದರು.
ಕೇರಳದ ವಿಧಾನಸಭೆಯಲ್ಲಿ 2017 ರಲ್ಲೂ ಈ ಮಸೂದೆಯನ್ನ ತಂದಿದ್ದರು ಆವಾಗಲೂ ಕೇರಳ ರಾಜ್ಯದವರಿಗೆ ಸಂಪೂರ್ಣವಾಗಿ ಜಯ ಸಿಗಲಿಲ್ಲ.
ಮಲಯಾಳಂ ಕಡ್ಡಾಗೊಳಿಸುವ ವಿಚಾರ ಕನ್ನಡಿಗರಿಗೆ ತದ್ವಿರುದ್ಧವಾಗಿದೆ ಎಂದು ಬೇವಿನಮರದ ಅಭಿಪ್ರಾಯಪಟ್ಟರು.ಕೇರಳ ರಾಜ್ಯಪಾಲರು ನಮ್ಮ ಜೊತೆ ಸೌಜನ್ಯಯುತವಾಗಿ ಮಾತನಾಡಿದ್ದರೆ ಅಲ್ಲಿನ ಕನ್ನಡಿಗರು ಸಂಪೂರ್ಣವಾಗಿ ವಿರೋಧ ಮಾಡಿದ್ದಾರೆ ಎಂದು ಸೋಮಣ್ಣ ತಿಳಿಸಿದರು.
