
ಚಾಂಪಿಯನ್ಸ್ ಟ್ರೋಫಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 50 ರನ್ಗಳಿಂದ ಸೋಲಿಸಿದೆ. ಅದರಂತೆ ಮಾರ್ಚ್ 9 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ದ ಸೆಣಸಾಡಲಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ ತಂಡ 50 ಓವರ್ಗಳಲ್ಲಿ 362ಗಳ ರನ್ ಶಿಖರವನ್ನೇ ನಿರ್ಮಿಸಿತ್ತು. ರಚಿನ್ ರವೀಂದ್ರ (108), ಕೇನ್ ವಿಲಿಯಮ್ಸನ್ (104) ಇಬ್ಬರು ಕೂಡ ಶತಕ ಸಿಡಿಸಿದರು. ಕೆಳ ಕ್ರಮಾಂಕದಲ್ಲಿ ಗ್ಲೆನ್ ಫಿಲಿಪ್ಸ್(49) ಸ್ಪೋಟಕ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ ಹೆಚ್ಚಾಗುವಂತೆ ನೋಡೊಕೊಂಡರು. ದಕ್ಷಿಣ ಆಫ್ರಿಕಾಗೆ ಕಿವೀಸ್ ದೊಡ್ಡ ಟಾರ್ಗೆಟ್ ಅನ್ನೇ ನೀಡಿತ್ತು. ಗುರಿ ಬೆನ್ನತ್ತಿದ್ದ ಆಫ್ರಿಕಾ ತಂಡ ನಾಯಕ ತೆಂಬಾ ಬವುಮಾ(56), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (69) ಆಡನ್ ಮಾರ್ಕಂ (31) ರನ್ ಗಳಿಸಿ ನಿರ್ಣಯಕ ಹಂತದಲ್ಲಿ ಔಟ್ ಆದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಕ್ರೀಸಿನಲ್ಲಿ ಭದ್ರವಾಗಿ ನಿಂತ ಡೇವಿಡ್ ಮಿಲ್ಲರ್ (100) ಶತಕ ಬಾರಿಸಿದರೂ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 50 ಓವರ್ಗಳಲ್ಲಿ 312 ರನ್ಗಳನ್ನು ಗಳಿಸಿ ನ್ಯೂಜಿಲೆಂಡ್ವ ವಿರುದ್ದ ಸೋತಿತ್ತು. ಆ ಮೂಲಕ 3ನೇ ಬಾರಿಗೆ ಫೈನಲ್ ಪ್ರವೇಶ ಮಾಡಿದರೆ, ದಕ್ಷಿಣ ಆಫ್ರಿಕಾ 2ನೇ ಬಾರಿಗೆ ಫೈನಲ್ ಪ್ರವೇಶಿಸುವ ಕನಸು ನುಚ್ಚುನೂರಾಯಿತ್ತು.

ಅಭಿಷೇಕ್.ಎಸ್