ಐಪಿಎಲ್ ಸೀಸನ್ 18ಕ್ಕೆ 10 ದಿನಗಳು ಮಾತ್ರ ಬಾಕಿ ಉಳಿದಿವೆ. 9 ತಂಡಗಳಿಗೆ ನಾಯಕ ಯಾರೆಂಬುದು ಬಹಿರಂಗವಾಗಿದೆ. ಆದರೆ ಡೆಲ್ಲಿ ತಂಡದ ನಾಯಕ ಮಾತ್ರ ಯಾರೆಂಬುದು ಇನ್ನೂ ತಿಳಿದು ಬಂದಿಲ್ಲ. ಮಾಹಿತಿಗಳ ಪ್ರಕಾರ ಡೆಲ್ಲಿ ಫ್ರಾಂಚೈಸಿಯ ಮಾಲೀಕರು ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮುಗಿಯುವರೆಗೂ ಕಾಯುವ ನಿರ್ಧಾರಕ್ಕೆ ಬಂದಿದ್ದರು. ಚಾಂಪಿಯನ್ಸ್ ಟ್ರೋಫಿ ಮುಗಿಯುತ್ತಿದ್ದಂತೆ ಡೆಲ್ಲಿ ಫ್ಯಾನ್ಸ್ ಬಹಳ ಕುತೂಹಲದಿಂದ ನಾಯಕ ಯಾರು ಆಗಬಹದು ಎಂಬುದನ್ನು ಕಾಯುತ್ತಿದ್ದಾರೆ. ಇದರ ನಡುವೆ ತಂಣಡದ ಮಾಲೀಕರು ಕೆಎಲ್ ರಾಹುಲ್ ಅವರನ್ನು ನಾಯಕನ್ನಾಗಿ ಮಾಡಲು ನಿರ್ಧಾರಿಸಿ ಈ ವಿಚಾರಕ್ಕೆ ಕೆಎಲ್ ರಾಹುಲ್ ಅವರ ಜೊತೆ ಚರ್ಚಿಸಿದಾಗ ಅವರು ನಾಯಕ ಸ್ಥಾನವನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಬ್ಯಾಟಿಂಗ್ನಲ್ಲಿ ಹೆಚ್ಚು ಗಮನ ಹರಿಸಬೇಕಾದ ಕಾರಣ ಕೆಎಲ್ ಈ ಒಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಸದ್ಯಕ್ಕೆ ಡೆಲ್ಲಿ ತಂಡದ ನಾಯಕತ್ವದ ರೇಸ್ನಲ್ಲಿ ಅಕ್ಷರ್ ಪಟೇಲ್ ಇದ್ದು ಬಹುತೇಲಕ ಅವರೇ ನಾಯಕರಾಗುವ ಸಾಧ್ಯತೆ ಹೆಚ್ಚಿದೆ.
