
ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಖುಷಿಯಲ್ಲಿ ಧಾಂಡಿಯಾ ಸ್ಟೆಪ್ಸ್ ಹಾಕಿ ಸಂಭ್ರಮಿಸಿದರು. ಫೋರ್ ಬಾರಿಸಿದ ಜಡೇಜಾ ಭಾರತವನ್ನು ಗೆಲ್ಲಿಸುತ್ತಿದಂತೆ ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್ ಮೈದಾನಕ್ಕೆ ನುಗಿದ್ದರು. ಪಂದ್ಯವನ್ನು ಡ್ರೆಸಿಂಗ್ ರೂಂನಲ್ಲಿ ಕುಳಿತು ನೋಡುತ್ತಿದ್ದ ವಿರಾಟ್, ರೋಹಿತ್ ಅಲ್ಲಿಂದಲೇ ಖುಷಿಯಲ್ಲಿ ನಗುತ್ತಾ ಮೈದಾನದ ಕಡೆ ಹೆಜ್ಜೆ ಹಾಕಿದರು. ಆಟಗಾರರು ಗೆದ್ದ ಸಂಭ್ರಮವನ್ನು ಆಚರಿಸುತ್ತಿದ್ದಾಗ ಮೈದಾನದಲ್ಲಿದ್ದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸ್ಟಂಪ್ಸ್ಗಳನ್ನು ಕೈಯಲ್ಲಿ ಹಿಡಿದು ಧಾಂಡಿಯಾ ಸ್ಟೆಪ್ಸ್ ಹಾಕಿದರು. 2013ರಲ್ಲಿ ಸಾಕಷ್ಟು ಫೇಮಸ್ ಆಗಿದ್ದ ಗಂಗ್ನಮ್ ಸ್ಟೈಲ್ ಹಾಡಿಗೆ ಭಾರತದ ಆಟಗಾರರು ಭರ್ಜರಿಯಾಗಿ ಸ್ಟೆಪ್ಸ್ ಹಾಕಿ ಕುಣಿದರು. ಜಡೇಜಾ, ಹರ್ಷಿತ್ ರಾಣಾ , ಅರ್ಶ್ದೀಪ್ ಸಿಂಗ್ ಒಟ್ಟಿಗೆ ಸ್ಟೆಪ್ಸ್ ಹಾಕಿ ಎಲ್ಲರ ಗಮನ ಸೆಳೆದರು. 12 ವರ್ಷಗಳ ಬಳಿಕ ಟ್ರೋಫಿ ಗೆದ್ದ ಸಂಭ್ರಮಕ್ಕೆ ಸ್ಟೇಡಿಯಂನಲ್ಲಿದ್ದ ಅಪಾರ ಅಭಿಮಾನಿಗಳು ಸಾಕ್ಷಿಯಾದರು.

ಅಭಿಷೇಕ್. ಎಸ್