Ashwaveega News 24×7 ಮಾರ್ಚ್ 23 – 2026 : ಗ್ಯಾಸ್ ಕೊರತೆ ಸಮಸ್ಯೆಯ ನಡುವೆ ಗ್ರಾಹಕರಿಗೆ ತ್ವರಿತ ಸೇವೆ ಒದಗಿಸಲು ಹರಿಯಾಣದ ಗುರುಗ್ರಾಮದಲ್ಲಿ ಎಲ್ಪಿಜಿ ಸಿಲಿಂಡರ್ ಎಟಿಎಂ ವ್ಯವಸ್ಥೆ ಆರಂಭಿಸಲಾಗಿದೆ.
ಭಾರತ್ ಪೆಟ್ರೋಲಿಯಂ ಸಂಸ್ಥೆಯಿಂದ ಪರಿಚಯಿಸಲಾದ ಈ ನೂತನ ತಂತ್ರಜ್ಞಾನದಿಂದ ಕೇವಲ ಎರಡು ರಿಂದ ಮೂರು ನಿಮಿಷಗಳಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಲು ಸಾಧ್ಯವಾಗಿದೆ.
ಗ್ರಾಹಕರು ತಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಓಟಿಪಿ ಪಡೆಯಬೇಕು. ನಂತರ ಖಾಲಿ ಸಿಲಿಂಡರ್ನ್ನು ಯಂತ್ರದಲ್ಲಿ ಇಟ್ಟು ಹೊಸ ಸಿಲಿಂಡರ್ನ್ನು ಸುಲಭವಾಗಿ ಪಡೆಯಬಹುದು.
ಈ ಪ್ರಕ್ರಿಯೆ ಸಂಪೂರ್ಣವಾಗಲು ಕೇವಲ ಕೆಲವೇ ನಿಮಿಷಗಳು ಸಾಕಾಗುತ್ತವೆ ಎಂಬುದು ವಿಶೇಷ. ಸದ್ಯಕ್ಕೆ 10 ಕೆಜಿ ವರೆಗೆ ಇರುವ ಕಾಂಪೋಸಿಟ್ ಸಿಲಿಂಡರ್ಗಳು ಮಾತ್ರ ಲಭ್ಯವಿವೆ.
ಮುಂದಿನ ದಿನಗಳಲ್ಲಿ ಈ ಎಲ್ಪಿಜಿ ಎಟಿಎಂ ಸೇವೆಯನ್ನು ದೇಶದಾದ್ಯಂತ ವಿಸ್ತರಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ.
