Ashwaveega News 24×7 ಮಾರ್ಚ್ 10 – 2026 : ಮನೆ ಬಳಕೆದಾರರಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಗ್ಯಾಸ್ ಬುಕ್ಕಿಂಗ್ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ನಿನ್ನೆ ಹೊಸದಾಗಿ ಸುತ್ತೋಲೆ ಹೊರಡಿಸಿರುವ ಸರ್ಕಾರ , ಇನ್ಮುಂದೆ ಒಂದು ಸಿಲಿಂಡರ್ ಬುಕ್ ಮಾಡಿದ ಬಳಿಕ 25 ದಿನಗಳ ಬಳಿಕವಷ್ಟೇ ಮತ್ತೊಂದು ಸಿಲಿಂಡರ್ ಬುಕ್ ಮಾಡಲು ಅವಕಾಶ ಇರಲಿದೆ ಅಂತೆ .
ಈ ಹೊಸ ನಿಯಮ ಮನೆ ಬಳಕೆಯ ಎಲ್ಪಿಜಿ ಸಿಲಿಂಡರ್ ಬಳಕೆದಾರರಿಗೂ ಅನ್ವಯವಾಗಲಿದ್ದು , ನಾನ್ ಕಮರ್ಷಿಯಲ್ ಸಿಲಿಂಡರ್ ಬಳಕೆದಾರರಿಗೂ ಇದು ಶಾಕ್ ನೀಡಿದೆ.
ಈ ಹಿಂದೆ ಗ್ಯಾಸ್ ಬುಕ್ಕಿಂಗ್ ಅವಧಿ 15 ದಿನಗಳು ಇತ್ತು. ನಂತರ ಅದನ್ನು 21 ದಿನಗಳಿಗೆ ಹೆಚ್ಚಿಸಲಾಗಿತ್ತು. ಆದರೆ ಇದೀಗ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಎಲ್ಪಿಜಿ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಬುಕ್ಕಿಂಗ್ ಅವಧಿಯನ್ನು 25 ದಿನಗಳಿಗೆ ಹೆಚ್ಚಿಸಲಾಗಿದೆ.
ಸಿಲಿಂಡರ್ಗಳ ಅಕ್ರಮ ದಾಸ್ತಾನು ಮತ್ತು ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ . ಹೀಗಾಗಿ ಇನ್ಮುಂದೆ ಗ್ರಾಹಕರು ಒಂದು ಸಿಲಿಂಡರ್ ಬುಕ್ ಮಾಡಿದ ನಂತರ 25 ದಿನಗಳು ಕಳೆದ ಬಳಿಕವೇ ಮತ್ತೊಂದು ಸಿಲಿಂಡರ್ ಬುಕ್ ಮಾಡಬೇಕಾಗಿದೆ, ಇದರಿಂದ ಗ್ಯಾಸ್ ಪೂರೈಕೆ ನಿರ್ವಹಣೆಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.
