Ashwaveega News 24×7 ಜನವರಿ 14 – ಬೆಂಗಳೂರು – Sankranti : ಸಂಕ್ರಾಂತಿ ಹಬ್ಬದ ಸಂಭ್ರಮ ಜೋರಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಭರಾಟೆ ಮನೆ ಮಾಡಿದೆ, ಜನರು ಹೂವು, ಹಣ್ಣು, ಕಬ್ಬು, ಅವರೆಕಾಯಿ, ಎಳ್ಳು-ಬೆಲ್ಲದಂತಹ ವಸ್ತುಗಳನ್ನು ಮುಗಿಬಿದ್ದು ಕೊಳ್ಳುತ್ತಿದ್ದಾರೆ. ಬೆಲೆ ಏರಿಕೆ ಇದ್ದರೂ ಜನರು ಉತ್ಸಾಹದಿಂದ ಹೊಸ ಬಟ್ಟೆ, ದಿನಸಿ ಮತ್ತು ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸುತ್ತಿದ್ದು, ಮಾರುಕಟ್ಟೆಗಳು ಜನಜಂಗುಳಿಯಿಂದ ತುಂಬಿವೆ.
ಹಬ್ಬದ ತಯಾರಿ ಹೇಗಿದೆ ಅಂತ ನೋಡುವುದಾದರೆ :
ಬೆಂಗಳೂರಿನ ಕೆ.ಆರ್. ಮಾರುಕಟ್ಟೆ, ಸೇರಿದಂತೆ ನಗರದ ಎಲ್ಲಾ ಕಡೆಗಳಲ್ಲಿ ಹಬ್ಬದ ಖರೀದಿ ಜೋರಾಗಿದೆ. ಚನ್ನಪಟ್ಟಣ, ಹೊಸಕೋಟೆ, ತಮಿಳುನಾಡಿನಿಂದ ಕಬ್ಬುಗಳು ಬಂದಿವೆ. ಕಬ್ಬು, ಅವರೆಕಾಯಿ, ಗೆಣಸು, ಕಡಲೆಕಾಯಿ, ಹೂವು, ಹಣ್ಣುಗಳು, ಎಳ್ಳು-ಬೆಲ್ಲದಂತಹ ವಸ್ತುಗಳ ವ್ಯಾಪಾರ ಭರಾಟೆಯಿಂದ ಸಾಗುತ್ತಿದ್ದು, ಸಂಕ್ರಾಂತಿ ಹಬ್ಬದ ಪ್ರಮುಖ ಉತ್ಪನ್ನಗಳು ಅಂತ ಹೇಳಬಹುದು .
ಸಂಕ್ರಾಂತಿ ಹಬ್ಬದ ಬಂದರೆ ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲದಲ್ಲಿ ಸಂಕ್ರಾಂತಿಯಂದು ಗವಿಗಂಗಾಧರೇಶ್ವರನಿಗೆ ಸೂರ್ಯನ ಕಿರಣ ಸ್ಪರ್ಶಿಸುವ ಕಾರ್ಯಕ್ರಮಕ್ಕೆ ನಡೆಯುತ್ತೆ , ದೇಗುಲದಲ್ಲಿ ಸ್ವಚ್ಛತಾ ಕಾರ್ಯ ಮತ್ತು ಸೂರ್ಯನ ಕಿರಣಗಳ ಸ್ಪರ್ಶದ ವಿಶ್ಲೇಷಣೆಗಾಗಿ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆಯಾಗಿ, ರಾಜ್ಯದಾದ್ಯಂತ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ.
ಸಂಕ್ರಾಂತಿ ಹಬ್ಬದಂದು ಸೂರ್ಯನು ಮಕರ ರಾಶಿಗೆ ಸಂಕ್ರಮಣಗೊಳ್ಳುವುದರಿಂದ ಉತ್ತರಾಯಣ ಆರಂಭವಾಗುತ್ತದೆ. ಇದು ಭಾರತದಾದ್ಯಂತ ಸುಗ್ಗಿ ಹಬ್ಬವಾಗಿ ಆಚರಿಸಲ್ಪಡುತ್ತದೆ. ಬೆಂಗಳೂರಿನಲ್ಲಿ ಎಲ್ಲರೂ ತಮ್ಮ ಮನೆಯನ್ನು ಸ್ವಚ್ಛಗೊಳಿಸಿ, ರಂಗೋಲಿ ಬರೆದು, ದೇವರಿಗೆ ಪೂಜೆ ಸಲ್ಲಿಸಿ, ಎಳ್ಳು-ಬೆಲ್ಲ ಸೇವನೆ ಮಾಡುತ್ತಾರೆ.
