ಬೆಂಗಳೂರು: ಹಸಿರು ಮಾರ್ಗ ಮೆಟ್ರೋ ಸಂಚಾರದಲ್ಲಿ ವ್ಯತೆಯ ಉಂಟಾಗಿದೆ. ಸಿಗ್ನೇಲಿಂಗ ಟೆಸ್ಟ್ ಕಾಮಗಾರಿಯ ಹಿನ್ನೆಲೆ, ರೇಷ್ಮೆ ಸಂಸ್ಥೆ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರಿ ನಿಲ್ದಾಣವರೆಗೆ ಮಾತ್ರ ಮೆಟ್ರೋ ಸಂಚಾರ ನಡೆಯುತ್ತಿದ್ದು, ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ನಿಲ್ದಾಣಗಳ ನಡುವೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಮೆಟ್ರೋ ಸಂಚಾರ ಇಲ್ಲದ ಕಾರಣ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಒಂದು ಕಡೆ ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಇನ್ನೊಂದು ಕಡೆ ಮೆಟ್ರೋ ಸಂಚಾರ ಸ್ಥಗಿತದಿಂದ ಕಂಗಾಲಾಗಿದ್ದಾರೆ. ಈ ಸಂದರ್ಭದಲ್ಲಿ ಆಟೋ ಚಾಲಕರು ದುರುಪಯೋಗ ಪಡೆಯುತ್ತಿದ್ದು, ಜನರಿಂದ ದುಪ್ಪಟ್ಟು ಹಣವನ್ನು ವಸೂಲಿ ಮಾಡುತ್ತಿದ್ದಾರೆ.