Ashwaveega News 24×7 ಏಪ್ರಿಲ್ 4– 2026 : ಕೇರಳ: ಮಲಪ್ಪುರಂನಿಂದ ವಾಂಡೂರ್ ಕಡೆಗೆ ತೆರಳುತ್ತಿದ್ದ Shashi Tharoor ಅವರ ಕಾನ್ವಾಯ್ ಮೇಲೆ ಮಧ್ಯರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಕೇರಳ ರಾಜಕೀಯದಲ್ಲಿ ಭಾರಿ ಸಂಚಲನ ಉಂಟುಮಾಡಿದೆ.
ಘಟನೆ ತಿರುವಿನಲ್ಲಿ ಚೆಲ್ಲಿತೋಡು ಸೇತುವೆ ಬಳಿ ನಡೆದಿದೆ. ದಾಳಿ ವೇಳೆ ಶಶಿ ತರೂರ್ ಗನ್ಮ್ಯಾನ್ ಮೇಲೆ ನಡೀತು ಅಟ್ಯಾಕ್ ಸಂಭವಿಸಿದ್ದು, ತಕ್ಷಣ ಸ್ಥಳಕ್ಕೆ ಪೊಲೀಸರು ಬಂದು ಕ್ವಿಕ್ ಆಕ್ಷನ್ ತೋರಿದರು. ಎರಡು ವಾಹನ ಸೇರಿ ಮೂವರನ್ನು ವಶಕ್ಕೆ ಪಡೆದು, ಕಲಿಕಾವು ನಿವಾಸಿ ಉಮ್ಮರ್ ಸೇರಿ ಮೂವರ ವಿರುದ್ಧ ಕಠಿಣ ಕೇಸ್ ದಾಖಲಾಗಿದೆ .
ಈ ಘಟನೆ ಏಪ್ರಿಲ್ 9ರಂದು ಏಕ ಹಂತದಲ್ಲಿ ನಡೆಯುವ ಕೇರಳ ಚುನಾವಣೆಗೆ ಮೊದಲು ರಾಜಕೀಯ ದೃಷ್ಟಿಯಿಂದ ಗಮನ ಸೆಳೆದಿದೆ . ರಾಜಕೀಯ ವಿಶ್ಲೇಷಕರು, ಚುನಾವಣೆ ಹಿನ್ನಲೆಯಲ್ಲಿ ಈ ದಾಳಿ ಪ್ರಚಾರದ ಬಲವನ್ನು ಹೆಚ್ಚಿಸುವುದೇ ಅಥವಾ ಭಯಮಯ ವಾತಾವರಣ ಸೃಷ್ಟಿಸುವುದೇ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ .
