Ashwaveega News 24×7 ಮಾರ್ಚ್ 30 – 2026 : ದಾವಣಗೆರೆ : ದಾವಣಗೆರೆ ಕ್ಷೇತ್ರದಲ್ಲಿ ನಡೆಯುತ್ತಿರುವ ಬೈಎಲೆಕ್ಷನ್ ಹಿನ್ನಲೆಯಲ್ಲಿ ರಾಜಕೀಯ ಕಣ ದಿನೇ ದಿನೇ ತೀವ್ರವಾಗಿ ಕಾವು ಪಡೆಯುತ್ತಿದ್ದು, ಬಿಜೆಪಿ ಸಚಿವ ಜಮೀರ್ ಅಹ್ಮದ್ ಅವರಿಗೆ ಹೊಸ ತಲೆನೋವು ಉಂಟಾಗಿದೆ . ಪ್ರಚಾರಕ್ಕೆ ತೆರಳಬೇಕೇ , ಬೇಡವೇ ಎಂಬ ಗೊಂದಲದಲ್ಲಿ ಅವರು ತಮ್ಮ ಮುಂದಿನ ಹೆಜ್ಜೆ ಕುರಿತು ತೀವ್ರ ಚಿಂತನೆ ನಡೆಸುತ್ತಿದ್ದಾರೆ.
ದಾವಣಗೆರೆ ಪ್ರಚಾರಕ್ಕೆ ಸಂಬಂಧಿಸಿದಂತೆ, ಎಸ್ಎಸ್ಎಂ (SSM) ಅವರೊಂದಿಗೆ ಸಚಿವರ ಭಿನ್ನಾಭಿಪ್ರಾಯ ಇನ್ನೂ ಶಮನವಾಗದ ಹಿನ್ನೆಲೆ , ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗಿದೆ . “ನೀನು ಯಾರು ನಮ್ಮ ಕ್ಷೇತ್ರದ ಬಗ್ಗೆ ಮಾತನಾಡೋಕೆ ?” ಎಂಬ ಮಲ್ಲಿಕಾರ್ಜುನ್ ಅವರ ಹೇಳಿಕೆಗೆ ಜಮೀರ್ ಅಹ್ಮದ್ ಅಸಮಾಧಾನ ಗೊಂಡಿರುವುದಾಗಿ ಮೂಲಗಳು ತಿಳಿಸಿವೆ .
ಇನ್ನೂ, ದಾವಣಗೆರೆ ಕ್ಷೇತ್ರಕ್ಕೆ ಬರಬಾರದೆಂದು SSM ಸೂಚನೆ ನೀಡಿರುವುದು ಪರಿಸ್ಥಿತಿಗೆ ಮತ್ತಷ್ಟು ತೀವ್ರತೆ ತಂದಿದೆ.. ಈ ಹಿನ್ನೆಲೆಯಲ್ಲಿ ಸಮರ್ಥ್ ಪರ ಪ್ರಚಾರದಲ್ಲಿ ಭಾಗವಹಿಸಬೇಕೇ ಬೇಡವೇ ಎಂಬುದರ ಕುರಿತು ಜಮೀರ್ ವೇಣುಗೋಪಾಲ್ ಅವರೊಂದಿಗೆ ಚರ್ಚಿಸಲು ಮುಂದಾಗಿದ್ದಾರೆ .
ಪಕ್ಷದ ವರಿಷ್ಠರ ಸೂಚನೆಗಳಿಗೆ ಮಹತ್ವ ನೀಡುತ್ತಲೇ , ಜಮೀರ್ ಮುಖ್ಯಮಂತ್ರಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅಭಿಪ್ರಾಯ ಕೇಳಿರುವುದಾಗಿ ವರದಿಯಾಗಿದೆ . “ನನಗೂ ಸ್ವಾಭಿಮಾನ ಅಡ್ಡ ಬರುತ್ತಿದೆ , ಏನು ಮಾಡಬೇಕು ? ” ಎಂದು ಅವರು ವ್ಯಕ್ತಪಡಿಸಿದ್ದಾರೆ .
ಟಿಕೆಟ್ ಹಂಚಿಕೆಯಲ್ಲಿ ಮುಸ್ಲಿಂ ಸಮುದಾಯ ಪರವಾಗಿ ಮಾತನಾಡಿದ ಹಿನ್ನೆಲೆಯಲ್ಲಿ, ಮಲ್ಲಿಕಾರ್ಜುನ್ ಅವರು ಜಮೀರ್ ವಿರುದ್ಧ ಕಿಡಿಕಾರಿಸಿದ್ದು, ಇಬ್ಬರ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಿದೆ . ಈ ಬೆಳವಣಿಗೆಗಳ ನಡುವೆ , ದಾವಣಗೆರೆ ಬೈಎಲೆಕ್ಷನ್ನಲ್ಲಿ ಜಮೀರ್ ಅಹ್ಮದ್ ಅವರ ಪಾತ್ರ ಏನಾಗಲಿದೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
