Ashwaveega News 24×7 ಏಪ್ರಿಲ್ 1 – 2026 : ಬೆಂಗಳೂರುದಲ್ಲಿ ನಡೆದ RCB vs SRH match ವೇಳೆ ನಡೆದ ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಎಂ.ಜಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್ ಸುತ್ತಮುತ್ತ ಪ್ರದೇಶಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ವಿವಿಧ ಕಂಪನಿಗಳ 21 ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವುಗಳ ಮೌಲ್ಯ ಸುಮಾರು 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಪ್ರಕರಣ ಸಂಬಂಧ ಈಗಾಗಲೇ 29 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ B Dayananda ತಿಳಿಸಿದ್ದಾರೆ .
ಇದೇ ರೀತಿಯ ಕಳ್ಳತನಗಳು ಇತರ ರಾಜ್ಯಗಳಲ್ಲೂ ಪಂದ್ಯಗಳ ವೇಳೆ ನಡೆದಿರುವ ಮಾಹಿತಿ ದೊರೆತಿದ್ದು, ಆ ದಿಕ್ಕಿನಲ್ಲೂ ತನಿಖೆ ಮುಂದುವರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ .
ಒಟ್ಟಾರೆ, ದೊಡ್ಡ ಕ್ರೀಡಾ ಈವೆಂಟ್ಗಳ ವೇಳೆ ನಡೆಯುವ ಕಳ್ಳತನಗಳನ್ನು ತಡೆಯಲು ಪೊಲೀಸರು ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಸಾರ್ವಜನಿಕರು ಕೂಡ ಜಾಗರೂಕರಾಗಿರಬೇಕು ಎಂದು ಮನವಿ ಮಾಡಲಾಗಿದೆ ….
