Ashwaveega News 24×7 ಫೆಬ್ರವರಿ 07 -2026 – ಪ್ರಧಾನಿ ನರೇಂದ್ರ ಮೋದಿ ಅವರ ನಿವೃತ್ತಿ ವಿಚಾರವಾಗಿ ದೇಶ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗುತಿದೆ . 75 ವರ್ಷ ತುಂಬಿದರೆ ನಿವೃತ್ತಿ ಎಂಬ ವದಂತಿಗಳಿಗೆ ಸ್ವತಃ ಪ್ರಧಾನಿ ಮೋದಿ ತಿರುಗೇಟು ನೀಡಿದ್ದು, ತಮ್ಮ ಮಾತುಗಳ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
“ನನಗಿನ್ನೂ 75 ವರ್ಷ ಪೂರ್ಣ ಆಗಿಲ್ಲ… ಇನ್ನೂ 25 ವರ್ಷ ಬಾಕಿ ಇದೆ. ಕಳೆದ ಕಾಲಕ್ಕಿಂತ ಮುಂದಿನ ದಿನಗಳಲ್ಲಿ ದೇಶಕ್ಕಾಗಿ ಮಾಡಬೇಕಾದ ಕೆಲಸಗಳ ಕಡೆ ಹೆಚ್ಚು ಗಮನಹರಿಸುತ್ತೇನೆ” ಎಂದು ತಮ್ಮಿಗೆ ಫೋನ್ ಮಾಡಿದವರಿಗೆ ಪ್ರಧಾನಿ ಮೋದಿ ಉತ್ತರಿಸಿದ್ದಾರೆ.
ತಮಗೆ ಈಗಾಗಲೇ 75 ವರ್ಷ ಆಗಿದೆಯೇ ? ನಿವೃತ್ತಿ ಯಾವಾಗ ? ಎಂಬ ಪ್ರಶ್ನೆಗೆ ಪ್ರಧಾನಿ ಮೋದಿ ನೀಡಿದ ಈ ಉತ್ತರ ಇದೀಗ ಸಂಚಲನ ಮೂಡಿಸಿದೆ. ಈ ಮಾತುಗಳನ್ನು ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ವೇಳೆ ಬಹಿರಂಗಪಡಿಸಿದ್ದು, ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಬಿಜೆಪಿಯಲ್ಲಿ 75 ವರ್ಷ ತುಂಬಿದ ನಾಯಕರು ಸಕ್ರಿಯ ರಾಜಕೀಯದಿಂದ ನಿವೃತ್ತರಾಗಬೇಕು ಎಂಬ ಅಲಿಖಿತ ನಿಯಮ ಇತ್ತು . ಆದರೆ, ಈ ನಿಯಮ ತಮಗೆ ಅನ್ವಯವಾಗುವುದಿಲ್ಲ ಎನ್ನುವುದನ್ನು ಹೇಳದೆಯೇ ಪ್ರಧಾನಿ ಮೋದಿ ಸ್ಪಷ್ಟ ಪಡಿಸಿದಂತಾಗಿದೆ.
“ಇನ್ನೂ 25 ವರ್ಷ ದೇಶಕ್ಕಾಗಿ ಕೆಲಸ ಮಾಡುವ ಕನಸು ಇದೆನಾ ?” ಎಂಬ ಪ್ರಶ್ನೆಗಳು ಇದೀಗ ದೇಶ ರಾಜಕೀಯದಲ್ಲಿ ಪ್ರತಿಧ್ವನಿಸುತ್ತಿವೆ. ಪ್ರಧಾನಿ ಮೋದಿ ಅವರ ಈ ಮಾತುಗಳು ಮುಂದಿನ ದಿನಗಳಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಹರಿದಾಡುತ್ತಿದ್ದ ಎಲ್ಲ ವದಂತಿಗಳಿಗೆ ಬ್ರೇಕ್ ಹಾಕಿದಂತಾಗಿದೆ.
ಪ್ರಧಾನಿ ಮೋದಿ ಹೇಳಿಕೆ ಬೆನ್ನಲ್ಲೇ, ಬಿಜೆಪಿ ಒಳಗೆಯೂ ಹಾಗೂ ವಿರೋಧ ಪಕ್ಷಗಳಲ್ಲೂ ಭಾರೀ ಚರ್ಚೆ ಶುರುವಾಗಿದೆ. ಮೋದಿ ರಾಜಕೀಯ ಇನ್ನೂ ದೀರ್ಘಾವಧಿಗೆ ಮುಂದುವರಿಯಲಿದೆಯೇ ಎಂಬ ಪ್ರಶ್ನೆ ಇದೀಗ ದೇಶದ ರಾಜಕೀಯದ ಕೇಂದ್ರಬಿಂದುವಾಗಿದೆ.
