Ashwaveega News 24×7 ಮಾರ್ಚ್ 23 – 2026 : ಬಾಗಲಕೋಟೆ : ಉಪಚುನಾವಣೆಯ ಹೊಸ್ತಿಲಲ್ಲಿ ರಾಜ್ಯ ರಾಜಕೀಯ ರಂಗ ಮತ್ತೆ ಕಾವೇರಿದ್ದು, ಹಣದ ಹೊಳೆ ಹರಿಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ B. Y. Vijayendra ತೀವ್ರ ವಾಗ್ದಾಳಿ ನಡೆಸಿದ್ದಾರೆ .
ಸೂಟ್ಕೇಸ್ಗಳಲ್ಲಿ ಅಲ್ಲ, ಗೋಣಿಚೀಲಗಳಲ್ಲಿ ಹಣ ತರಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಆಡಳಿತ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿ ಸೇರಿ ಸಂಪುಟದ ಸದಸ್ಯರೆಲ್ಲ ಕ್ಷೇತ್ರದಲ್ಲಿ ಠಿಕಾಣಿ ಹೂಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ .
ಇದು ಬಡವರು, ದಲಿತರು ಹಾಗೂ ಯುವಕರ ವಿರುದ್ಧ ಕೆಲಸ ಮಾಡುವ ಸರ್ಕಾರ ಎಂದು ಆರೋಪಿಸಿದ ವಿಜಯೇಂದ್ರ, ನಾಲಾಯಕ್ ಆಡಳಿತದ ವಿರುದ್ಧ ಜನರು ಬೇಸತ್ತಿದ್ದಾರೆ ಎಂದು ಹೇಳಿದ್ದಾರೆ. ಆಡಳಿತ ಪಕ್ಷ ಎಷ್ಟೇ ಹರಸಾಹಸ ಮಾಡಿದರೂ ಬಿಜೆಪಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು .
ಬಾಗಲಕೋಟೆ ಮತ್ತು ದಾವಣಗೆರೆಯ ಉಪಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸುವುದಾಗಿ ಅವರು ಘೋಷಿಸಿದರು. ಈ ಹಿಂದೆ ಶಿರಾ ಮತ್ತು ಕೆ.ಆರ್.ಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕುತಂತ್ರ ನಡೆಸಿದೆ ಎಂದು ಆರೋಪಿಸಿದರು .
ಯಾವುದೇ ಸಂದರ್ಭದಲ್ಲೂ ಕಾರ್ಯಕರ್ತರು ಮೈಮರೆಯಬಾರದು ಎಂದು ಕರೆ ನೀಡಿದ ಅವರು, B. S. Yediyurappa ಅವರ ಆಶೀರ್ವಾದ ಪಡೆದುಕೊಂಡು ಬಂದಿರುವುದಾಗಿ ತಿಳಿಸಿದರು .
ಕ್ಷೇತ್ರದಲ್ಲಿ ಉಂಟಾಗಿದ್ದ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಿ, ಅಭ್ಯರ್ಥಿ ವೀರಣ್ಣ ಚರಂತಿಮಠರ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದು ವಿಜಯೇಂದ್ರ ಹೇಳಿದರು .
ಒಟ್ಟಿನಲ್ಲಿ, ಉಪಚುನಾವಣೆ ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳ ಜೋರಾಗಿದ್ದು, ಮತದಾರರ ಗಮನ ಸೆಳೆಯುವ ಯತ್ನಗಳು ತೀವ್ರಗೊಂಡಿವೆ .
