Ashwaveega News 24×7 ಫೆಬ್ರವರಿ 05 -2026 – ವಿಜಯನಗರ ಜಿಲ್ಲೆಯ ಐತಿಹಾಸಿಕ ಸುಕ್ಷೇತ್ರ ಮೈಲಾರದಲ್ಲಿ ಈ ವರ್ಷದ ಕಾರ್ಣಿಕ ಭವಿಷ್ಯ ನುಡಿದಿದೆ. ಹೂವಿನ ಹಡಗಲಿ ತಾಲೂಕಿನ ಮೈಲಾರದಲ್ಲಿ ನಡೆದ ಮೈಲಾರಲಿಂಗ ಜಾತ್ರಾ ಮಹೋತ್ಸವದ ವೇಳೆ, ರಾಜ್ಯಾದ್ಯಂತ ಲಕ್ಷಾಂತರ ಭಕ್ತರ ಗಮನ ಸೆಳೆದ ಕಾರ್ಣಿಕ ಘೋಷಣೆ ಕೇಳಿಬಂದಿದೆ.
18 ಅಡಿ ಎತ್ತರದ ಬಿಲ್ಲನೇರಿಗೆ ಏರಿದ ಗೊರವಯ್ಯ ರಾಮಯ್ಯ, “ಸಂಪಾಗಿತಲೇ ಪರಾಕ್” ಎಂದು ಕಾರ್ಣಿಕ ಭವಿಷ್ಯ ನುಡಿದರು. ಈ ಘೋಷಣೆಯೊಂದಿಗೆ ಭಕ್ತರಲ್ಲಿ ಸಂತಸ, ಸಂಭ್ರಮದ ವಾತಾವರಣ ನಿರ್ಮಾಣವಾಯಿತು.
“ಸಂಪಾಗಿತಲೇ ಪರಾಕ್” ಅಂದ್ರೆ, ರಾಜ್ಯದಲ್ಲಿ ಸಮೃದ್ಧಿ, ಸುಖಶಾಂತಿ, ಉತ್ತಮ ಫಲಶ್ರುತಿ ದೊರೆಯಲಿದೆ ಅನ್ನೋ ಅರ್ಥ. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ ಸಮೃದ್ಧಿ, ರೈತರಿಗೆ ಅನುಕೂಲಕರ ವಾತಾವರಣ ಇರುತ್ತದೆ . ಅಂತ ಕಾರ್ಣಿಕ ಭವಿಷ್ಯ ನುಡಿದಿದ್ದಾರೆ .
ಗೊರವಯ್ಯ ರಾಮಯ್ಯ ಅವರ ಕಾರ್ಣಿಕ ನುಡಿಗಳು ರಾಜ್ಯದ ಆರ್ಥಿಕ, ಕೃಷಿ ಮತ್ತು ಸಾಮಾಜಿಕ ಸ್ಥಿತಿಗತಿ ಉತ್ತಮವಾಗಲಿದೆ ಎಂಬ ಸೂಚನೆ ಕೊಡುತ್ತವೆ ಅನ್ನೋ ನಂಬಿಕೆ ಭಕ್ತರಲ್ಲಿ ಗಟ್ಟಿಯಾಗಿದೆ.
ಪ್ರತಿ ವರ್ಷ ಮೈಲಾರದ ಕಾರ್ಣಿಕ ಭವಿಷ್ಯರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗುತ್ತೆ.ಈ ಬಾರಿಯೂ “ಸಂಪಾಗಿತಲೇ ಪರಾಕ್” ಘೋಷಣೆ ರೈತರು, ಜನಸಾಮಾನ್ಯರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಐತಿಹಾಸಿಕ ಮೈಲಾರ ಕ್ಷೇತ್ರದಿಂದ ಹೊರಬಿದ್ದ ಈ ಕಾರ್ಣಿಕ, ಈ ವರ್ಷ ರಾಜ್ಯಕ್ಕೆ ಸಮೃದ್ಧಿಯ ವರ್ಷವಾಗಲಿದೆ ಅನ್ನೋ ವಿಶ್ವಾಸ ಮೂಡಿಸಿದೆ.
