ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2024ಕ್ಕೆ ದಸರಾ ಗಜಪಡೆಯ ಎರಡನೇ ತಂಡ ಇಂದು ಮೈಸೂರಿಗೆ ಆಗಮಿಸಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಮೊದಲ ತಂಡಕ್ಕೆ ಸೇರಿಕೊಂಡು, ಇನ್ನೊಂದು 5 ಆನೆಗಳು ಮೈಸೂರಿಗೆ ಆಗಮಿಸಿವೆ. ಈ 2ನೇ ತಂಡದಲ್ಲಿ 3 ಗಂಡು ಹಾಗೂ 2 ಹೆಣ್ಣಾನೆಗಳಿದ್ದು, ಲಾರಿಗಳ ಮೂಲಕ ಮೈಸೂರಿಗೆ ತರಲಾಗಿದೆ. ದುಬಾರೆ ಆನೆ ಶಿಬಿರದಿಂದ ಪ್ರಶಾಂತ ಹಾಗೂ ಸುಗ್ರೀವ, ಮತ್ತಿಗೋಡು ಶಿಬಿರದಿಂದ ಮಹೇಂದ್ರ ಮತ್ತು ದೊಡ್ಡ ಹರವೆ ಶಿಬಿರದಿಂದ ಲಕ್ಷ್ಮೀ ಮತ್ತು ಹಿರಣ್ಯ ಆನೆಗಳು ಮೈಸೂರಿಗೆ ಪ್ರವೇಶ ಮಾಡಿವೆ. ಮೈಸೂರು ದಸರಾ ಮಹೋತ್ಸವದ ವೇಳೆ ಒಟ್ಟು 14 ಆನೆಗಳು ಭಾಗವಹಿಸುತ್ತಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ 5 ಆನೆಗಳು ಅರಮನೆಗೆ ಬರುವ ನಿರೀಕ್ಷೆ ಇದೆ.