ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಭಾಗವಾಗಿ ದಸರಾ ಗಜಪಡೆಗಳಿಗೆ ಇಂದು ತೂಕ ಪರೀಕ್ಷೆ ನಡೆಸಲಾಗಿದೆ. ಮೈಸೂರಿನ ಸಾಯಿರಾಮ ತೂಕ ಪರೀಕ್ಷಾ ಕೇಂದ್ರದಲ್ಲಿ ಈ ತೂಕ ಪರೀಕ್ಷೆ ಜರುಗಿದ್ದು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಗಿದೆ.
- ಅಭಿಮನ್ಯು: 5560 ಕೆ.ಜಿ.
- ಭೀಮ: 4945 ಕೆ.ಜಿ.
- ಏಕಲವ್ಯ: 4730 ಕೆ.ಜಿ.
- ಕಂಜನ್: 4515 ಕೆ.ಜಿ.
- ಧನಂಜಯ: 5155 ಕೆ.ಜಿ.
- ಲಕ್ಷ್ಮಿ: 2480 ಕೆ.ಜಿ.
- ವರಲಕ್ಷ್ಮಿ: 3495 ಕೆ.ಜಿ.
- ರೋಹಿತ: 3625 ಕೆ.ಜಿ.
- ಗೋಪಿ: 4970 ಕೆ.ಜಿ.
ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯು 5560 ಕೆ.ಜಿ. ತೂಕದೊಂದಿಗೆ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದಾನೆ.
ಅರಮನೆಗೆ ಬಂದ ಗಜಪಡೆ:
ಆನೆಗಳ ತೂಕ ಪರೀಕ್ಷೆಯ ಜೊತೆಗೆ, ಅವರ ಆರೋಗ್ಯದ ಮೇಲೂ ವಿಶೇಷ ಗಮನ ಹರಿಸಲಾಗಿದೆ. ಆನೆಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು, ದಸರಾ ಮುನ್ನ ಮತ್ತೆ ತೂಕ ಪರೀಕ್ಷೆ ನಡೆಸಲಾಗುತ್ತದೆ. ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದೆ ಎಂದು ಡಿಸಿಎಫ್ ಡಾ. ಪ್ರಭುಗೌಡ ತಿಳಿಸಿದ್ದಾರೆ.