
xr:d:DAFerDCDxec:303,j:3464238392,t:23042612
ಐಪಿಎಲ್ ಆಡಿದ ಮೊದಲ ಸೀಸನ್ನಲ್ಲೇ ಚಾಂಪಿಯನ್ ಆದ ಗುಜರಾತ್ ಟೈಟಾನ್ಸ್ ತಂಡದ ಮಾಲೀಕರು ಬದಲಾಗುವ ಸಾಧ್ಯತೆಯಿದೆ. ಗುಜರಾತ್ ತಂಡದ ಸ್ಪೇಕ್ ಮಾರಾಟವಾಗಿದ್ದು ಇದನ್ನು ಖರೀದಿಸಲು ಟೊರೆಂಟ್ ಗ್ರೂಪ್ ಆಸಕ್ತಿ ತೋರಿದೆ. ಇದು ಯಶಸ್ವಿಯಾದರೆ ಈ ಬಾರಿಯ ಐಪಿಎಲ್ನಲ್ಲಿ ಟೊರೆಂಟ್ ಗ್ರೂಪ್ ಮಾಲೀಕತ್ವದ ಗುಜರಾತ್ ಟೈಟಾನ್ಸ್ ತಂಡ ಕಣಕ್ಕಿಳಿಯಬಹುದು. ಗುಜರಾತ್ ತಂಡದ ಮಾಲೀಕರಾದ ಸಿವಿಸಿ ಕ್ಯಾಪಿಟಲ್ಸ್ ಜೊತೆ ಟೊರೆಂಟ್ ಗ್ರೂಪ್ ತಂಡದ ಪಾಲು ಖರೀದಿಸುವ ಸಲುವಾಗಿ ಮಾತುಕತೆ ನಡೆಸಿದೆ. ಈ ಪೈಕಿ ಶೇಕಡಾ 67% ರಷ್ಟು ಪಾಲನ್ನು ಖರೀದಿಸಲು ಟೊರೆಂಟ್ ಗ್ರೂಪ್ ಮುಂದಾಗಿದೆ ಎಂದು ವರದಿಯಾಗಿದೆ. 2021ರಲ್ಲಿ ರೂಪುಗೊಂಡ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯನ್ನು ಸಿವಿಸಿ ಕ್ಯಾಪಿಟಲ್ಸ್ ಪಾರ್ಟ್ನರ್ಸ್ 5625 ಕೋಟಿ ರೂ ಬಿಡ್ ಮಾಡಿ ಖರೀದಿಸಿತ್ತು.ಇದೀಗ ಫ್ರಾಂಚೈಸಿಯು ತನ್ನ ಬಹುಪಾಲನ್ನು ಮಾರಾಟ ಮಾಡಲು ನಿರ್ಧಾರ ಮಾಡಿದೆ..

ಅಭಿಷೇಕ್ ಎಸ್