
ಚಾಂಪಿಯನ್ಸ್ ಟ್ರೋಫಿ 6ನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ Vs ಬಾಂಗ್ಲಾದೇಶ ತಂಡಗಳು ಕಾದಾಟ ನಡೆಸಲಿವೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಗೆದ್ದು ಟೂರ್ನಿಯಲ್ಲಿ ಕಿವೀಸ್ ಶುಭಾರಂಭ ಮಾಡಿದೆ. ಇನ್ನೊಂದೆಡೆ ತನ್ನ ಮೊದಲ ಪಂದ್ಯದಲ್ಲೇ ಬಲಿಷ್ಠ ಭಾರತ ವಿರುದ್ದ ಸೋತಿರುವ ಬಾಂಗ್ಲಾದೇಶಕ್ಕೆ ಈ ಪಂದ್ಯ ಅತ್ಯಂತ ಮಹತ್ವದಾಗಿದೆ. ತಂಡದಲ್ಲಿ ಹಲವಾರು ಅನುಭವಿ ಆಟಗಾರರಿದ್ದರು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ಬರುತ್ತಿಲ್ಲ.

ನಾಯಕ ನಜ್ಮುಲ್ ಹೊಸೈನ್ , ಮಶ್ಫಿಕರ್ ರಹೀಮ್, ಸೌಮ್ಯ ಸರ್ಕಾರ್,ಮುಸ್ತಾಫಿಜುರ್ ರೆಹಮಾನ್,ತಮೀಮ್ ಇಕ್ಪಾಲ್ ಮಹಮ್ಮದುಲ್ಲಾರಂತಹ ಆಟಗಾರರು ಮಿಂಚಬೇಕಿದೆ. ಒಂದು ವೇಳೆ ಬಾಂಗ್ಲಾ ತಂಡ ಈ ಪಂದ್ಯದಲ್ಲಿ ಸೋತರೆ ಮುಂದಿನ ಹಂತ ಕಠಿಣವಾಗಿರಲಿದೆ. ಇತ್ತ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಗೆದ್ದು ಆತ್ಮವಿಶ್ವಾಸದಲ್ಲಿರುವ ನ್ಯೂಜಿಲ್ಯಾಂಡ್ ತಂಡ ಈ ಪಂದ್ಯವನ್ನು ಗೆದ್ದು ಸೆಮಿಫೈನಲ್ ಟಿಕೆಟ್ ಖಾತ್ರಿ ಮಾಡಿಕೊಳ್ಳುವತ್ತ ಗಮನ ಹರಿಸಿದೆ. ಅದರಂತೆ ಮಚೆಲ್ ಸ್ಯಾಂಟ್ನರ್ ಬೌಲಿಂಗ್ನಲ್ಲಿ ಶೈನ್ ಆಗುತ್ತಿದ್ದಾರೆ. ಇವರ ಜೊತೆಗೆ ಟಾಮ್ ಲಾಥಮ್, ವಿಲ್ ಯಂಗ್, ಡೆವೊನ್ ಕಾನ್ವೇ,ಕೇನ್ ವಿಲಿಯಮ್ಸನ್, ಕೈಲ್ ಜೇಮಿಸನ್ರಂತಹ ಆಟಗಾರರಿದ್ದು ಬಾಂಗ್ಲಾದೇಶ ವಿರುದ್ದ ಉತ್ತಮ ಪ್ರದರ್ಶನ ನೀಡುವ ಲೆಕ್ಕಾಚಾರದಲ್ಲಿದ್ದಾರೆ.
ಅಭಿಷೇಕ್ ಎಸ್