Ashwaveega News 24×7 ಜನವರಿ 18 – ಕನ್ನಡ ಚಿತ್ರರಂಗದ ಹಿರಿಯ ನಟರಿಗೆ ಗೌರವ ನೀಡಬೇಕಾದ ಸ್ಥಳದಲ್ಲೇ ಅವರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಗಾಂಧಿನಗರದ AMB ಸ್ಕ್ರೀನ್ಸ್ ವಿರುದ್ಧ ಕೇಳಿಬಂದಿದೆ. ತೆಲುಗು ನಟ ಮಹೇಶ್ ಬಾಬು ಒಡೆತನದ AMB ಥಿಯೇಟರ್ನಲ್ಲಿ ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ಹಿರಿಯ ನಟರ ಫೋಟೋಗಳಿಗೆ ಜಾಗ ನೀಡದೆ ಇರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ನಾಗ್, ಪುನೀತ್ ರಾಜ್ ಕುಮಾರ್, ರವಿಚಂದ್ರನ್, ದರ್ಶನ್ ಸೇರಿದಂತೆ ಕನ್ನಡ ಚಿತ್ರರಂಗವನ್ನು ಕಟ್ಟಿದ ಅನೇಕ ಮಹಾನ್ ಕಲಾವಿದರ ಫೋಟೋಗಳು ಗ್ಯಾಲರಿಯಲ್ಲಿ ಕಾಣದಿರುವುದು ಅಭಿಮಾನಿಗಳನ್ನು ಕೆರಳಿಸಿದೆ. ಅದರಲ್ಲೂ ದರ್ಶನ್ ಫೋಟೋ ಇಲ್ಲದೇ ಇರುವುದು ’ಭಾರೀ ವಿವಾದಕ್ಕೆ ತಿರುಗಿದೆ . ಇತ್ತೀಚೆಗೆ ಹಿಟ್ ಆಗಿರುವ ಕೆಲವು ನಟರ ಫೋಟೋಗಳನ್ನು ಮಾತ್ರ ಪ್ರದರ್ಶಿಸಲಾಗಿದ್ದು, ಹಿರಿಯ ಕಲಾವಿದರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಕನ್ನಡ ಚಿತ್ರರಂಗಕ್ಕೆ ದಶಕಗಳ ಕಾಲ ಸೇವೆ ಸಲ್ಲಿಸಿದ ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ, ಯಶ್, ಗಣೇಶ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಮುರಳಿ ಅವರ ಫೋಟೋಗಳು ಮಾತ್ರ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದು, ಹಿರಿಯ ನಟರ ಚಿತ್ರಗಳು ಇಲ್ಲದಿರುವುದು ಪ್ರಶ್ನಾರ್ಥಕವಾಗಿದೆ. ಈ ನಡುವೆ AMB ಸ್ಕ್ರೀನ್ಸ್ಗೆ ಭೇಟಿ ನೀಡಿದ್ದ ನಿರ್ದೇಶಕ ರವಿ ಶ್ರೀವತ್ಸ, ದರ್ಶನ್ ಫೋಟೋ ಇಲ್ಲದಿರುವ ಬಗ್ಗೆ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. “ಕನ್ನಡ ಚಿತ್ರರಂಗವನ್ನು ಕಟ್ಟಿದ ನಟರಿಗೆ ಗೌರವ ಸಿಗಬೇಕಾದ ಜಾಗದಲ್ಲೇ ನಿರ್ಲಕ್ಷ್ಯ ತೋರಲಾಗುತ್ತಿದೆ” ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
“ಕನ್ನಡದ ನೆಲದಲ್ಲೇ ಕನ್ನಡ ನಟರಿಗೆ ಗೌರವ ಇಲ್ಲವೇ?”
“ವಾಣಿಜ್ಯ ಮಾತ್ರ ಮುಖ್ಯವೇ, ಸಂಸ್ಕೃತಿ ಬೇಡವೇ?”
ಈ ಪ್ರಶ್ನೆಗಳಿಗೆ ಉತ್ತರ ಸಿಗುತ್ತ ಇಲ್ವಾ ಅಂತ ಕಾದು ನೋಡಬೇಕಾಗಿದೆ ….
